ಹೆಂಡತಿ ಕಳಿಸದಿದ್ದಕ್ಕೆ ಮಾವನ ತೋಟ ಕಡಿದು ಹಾಕಿದ ಅಳಿಯ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ತನ್ನ ಪತ್ನಿಯನ್ನು ಮನೆಗೆ ವಾಪಸ್‌ ಕಳಿಸಿಲ್ಲ ಎಂಬ ಸಿಟ್ಟಿಗೆ ಮಾವ ಬೆಳೆಸಿದ್ದ ಅಡಿಕೆ ಸಸಿಗಳನ್ನು ಅಳಿಯನೊಬ್ಬ ಕಡಿದು ಹಾಕಿದ ಘಟನೆ ಬಗ್ಗೆ ವರದಿಯಾಗಿದೆ.  

ಹಾನಗಲ್ ತಾಲ್ಲೂಕಿನ ಬಸಾಪುರದಲ್ಲಿ ಮಾವನ ಜಮೀನಿನಲ್ಲಿ ಬೆಳೆದಿದ್ದ 106 ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ್ದರ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರುದಾರರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವ್ಯಕ್ತಿಯೊಬ್ಬರಿಗೆ ತಮ್ಮ ಮಗಳನ್ನು ಕೊಟ್ಟಿದ್ದರು. ವಿವಿಧ ವಿಚಾರಗಳಿಗೆ ಅಳಿಯನ ವಿರುದ್ಧ ಈ ಕುಟುಂಬ ಸಿಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಮಗಳು ತವರು ಮನೆಗೆ ವಾಪಸ್‌ ಆಗಿದ್ದರು.

ಈ ವಿಷಯದಲ್ಲಿ ಅಳಿಯ ತನ್ನ ಪತ್ನಿಯನ್ನು ವಾಪಸ್‌ ಕಳುಹಿಸುವಂತೆ ಒತ್ತಾಯಿಸಿದ್ದ. ಆದರೆ ಮಾವ ಮದ್ಯವ್ಯಸನ ಬಿಟ್ಟು ಬಿಡುವಂತೆ ಒತ್ತಾಯಿಸಿದ್ದರು. ಈ ನಡುವೆ ಸಿಟ್ಟಿಗೆದ್ದ ಅಳಿಯ ಇದೇ 23 ರ ರಾತ್ರಿ 106 ಅಡಿಕೆ ಸಸಿಗಳನ್ನ ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.

 

- Advertisement -  - Advertisement - 
Share This Article
error: Content is protected !!
";