ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತವನ್ನು ರಕ್ಷಿಸುತ್ತಿದೆ ಆಕಾಶ್! ಭಾರತದ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿಗೆ ಪಾಕ್ ಯತ್ನಕ್ಕೆ ಭಾರತದ ಶಕ್ತಿಶಾಲಿ ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿದೆ.ಇದರಲ್ಲಿ ಮುಂಚೂಣಿಯಲ್ಲಿ ನಿಂತಿರುವುದು ಸಂಪೂರ್ಣ ದೇಶಿ ನಿರ್ಮಿತ ಆಕಾಶ್‌ಕ್ಷಿಪಣಿ ನಿರೋಧಕ ವ್ಯವಸ್ಥೆ ಎಂದು ಬಿಜೆಪಿ ತಿಳಿಸಿದೆ.
ಡಿಆರ್‌ಡಿಒ ವಿಜ್ಙಾನಿ ಪದ್ಮಶ್ರೀ ಪುರಸ್ಕೃತ ಡಾ. ಪ್ರಹ್ಲಾದ್‌ರಾಮ ರಾವ್‌ನೇತೃತ್ವದಲ್ಲಿ 15 ವರ್ಷಗಳ ಸತತ ಪರಿಶ್ರಮದಿಂದ ಅಭಿವೃದ್ಧಿಪಡಿಸಲಾಗಿದೆ.
ಇದು ಸಂಪೂರ್ಣವಾಗಿ ಭಾರತದಲ್ಲಿಯೇ ವಿನ್ಯಾಸ, ಅಭಿವೃದ್ಧಿ ಹಾಗೂ ಉತ್ಪಾದನೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಿಜೆಪಿ ಹೇಳಿದೆ.