ವಿಧಾನಸಭಾ ಕಲಾಪ ಮಂಗಳವಾರಕ್ಕೆ ಮುಂದೂಡಿದ ಸಭಾಧ್ಯಕ್ಷರು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದು ಮಧ್ಯಾಹ್ನ 2.15 ಕ್ಕೆ ಪ್ರಾರಂಭವಾಗಬೇಕಿದ್ದ ವಿಧಾನಸಭಾ ಕಾರ್ಯಕಲಾಪವು ತಡವಾಗಿ 3 ಗಂಟೆಗೆ ಪ್ರಾರಂಭವಾಯಿತು. ಕಲಾಪ ಪ್ರಾರಂಭದಲ್ಲಿ ಸಭಾಧ್ಯಕ್ಷರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಲು ಪೆÇನ್ನಣ್ಣ ಅವರಿಗೆ ಅವಕಾಶ ನೀಡಲು ಮುಂದಾದಾಗ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ನೈತಿಕತೆ ಹೊತ್ತು ಸಚಿವ ತಿಮ್ಮಾಪೂರ ಅವರಿಂದ ರಾಜೀನಾಮೆ ಪಡೆಯಬೇಕೆಂದು ಹಾಗೂ ಈ ವಿಷಯದ ಮೇಲೆ ನಿಲುವಳಿ ಸೂಚನೆಯಡಿ ಚರ್ಚೆಗೆ ಈಗಲೇ ಅವಕಾಶ ನೀಡಬೇಕೆಂದು ಪಟ್ಟುಹಿಡಿದರು.    

ಹಿಂದೆ ನೀವು ವಿರೋಧ ಪಕ್ಷದಲ್ಲಿದ್ದಾಗ ಈಶ್ವರಪ್ಪ ಅವರ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ತಾವೆಲ್ಲರೂ ಮೊದಲು ಅವರು ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದಿರಲಿಲ್ಲವೆ. ಅದರಂತೆ ಅವರು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿದ್ದರು. ಈಗ ನಿಮ್ಮ ಸಚಿವರು ಕೂಡ ಅದರಂತೆಯೇ ಮೊದಲು ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕೆಂದು ಆಗ್ರಹಿಸಿ, ವಂದನಾ ನಿರ್ಣಯದ ಮೇಲೆ ಚರ್ಚಿ ನಡೆಸಲು ಅವರು ಸಭೆಯಲ್ಲಿ ಅಡ್ಡಿಪಡಿಸಿದರು.     

- Advertisement - 

ಸಭಾಧ್ಯಕ್ಷರು ನಿಲುವಳಿ ಸೂಚನೆ ಮೇಲಿನ ಈ ಚರ್ಚೆಯನ್ನು 69 ಕ್ಕೆ ಬದಲಾಯಿಸಿ ಚರ್ಚೆಗೆ  ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದಗಾಗ್ಯೂ ಕೂಡ ವಿರೋಧ ಪಕ್ಷದವರು ಅದಕ್ಕೆ ಒಪ್ಪದೇ, ನಮ್ಮ ಬಳಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದು, ಈಗಲೇ ಚರ್ಚೆಗೆ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿಯಲಾಗಿ, ಸಭಾಧ್ಯಕ್ಷರು ಮತ್ತೆ 15 ನಿಮಿಷ ಸಭೆಯನ್ನು ಮುಂದೂಡಿದರು.

ಆನಂತರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದವರೆಲ್ಲರೂ ಸದನದ ಬಾವಿಗಿಳಿದು ಧರಣೆಗಿಳಿದರು. ಧೋರಣೆಯಿಂದ ಯಾವುದೇ ಸಚಿವರು ರಾಜೀನಾಮೆ ಕೊಟ್ಟ ಇತಿಹಾಸ ಇಲ್ಲ. ಹಾಗಾಗಿ ಧೋರಣೆಯನ್ನು ಕೈಬಿಡುವಂತೆ ಅವರು ವಿರೋಧ ಪಕ್ಷದ ನಾಯಕರಲ್ಲಿ ಮನವಿ ಮಾಡಿದರೂ, ಅವರು ಧರಣಿಯನ್ನು ಕೈಬಿಡದ ಕಾರಣ ಸಭಾಧ್ಯಕ್ಷರು ವಿಧಾನಸಭಾ ಕಲಾಪವನ್ನು 27 ನೇ ತಾರೀಖು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು.

- Advertisement - 

Share This Article
error: Content is protected !!
";