ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಒಳ ಜಗಳ ಇದೀಗ ಮತ್ತೊಮ್ಮೆ ಬೀದಿಗೆ ಬರಲು ವೇದಿಕೆ ಸಿದ್ಧವಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ತಿಳಿಸಿದೆ. ಕೆಎಂಎಫ್ ಅಧ್ಯಕ್ಷ ಗಾದಿಗೆ ಒಂದು ಕಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಬಣ ಕಣ್ಣಿಟ್ಟಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಹೋದರರನ್ನೇ ಕೆಎಂಎಫ್ ಅಧ್ಯಕ್ಷ ಹುದ್ದೆಗೆ ಕೂರಿಸಲು ಸಜ್ಜಾಗಿದ್ದರೆ, ಅತ್ತ ಸಿದ್ದರಾಮಯ್ಯ ಅವರು ತಮ್ಮ ಆಪ್ತರನ್ನೇ ಮುಂದುವರಿಸಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಡಿಕೆಶಿ ಅವರಿಗೆ ಕಾಂಗ್ರೆಸ್‌ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ಮುಡಾ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದರೂ, ಒಳಗಿಂದೊಳಗೆ ಮಾತ್ರ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಡಿಕೆಶಿ ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು.
ಹೀಗಾಗಿ ಸಿದ್ದರಾಮಯ್ಯ ಬಣ ಬಂಡೆಯನ್ನು ಕುಟ್ಟಿ ಪುಡಿ ಮಾಡುವ ಯಾವುದೇ ಅವಕಾಶವನ್ನು ಕೈ ಚೆಲ್ಲುತ್ತಿಲ್ಲ ಎಂದು ಹೇಳಿದೆ.
ಕೆಎಂಎಫ್‌ಚುನಾವಣೆ ಡಿಕೆಶಿ ಮತ್ತು ಸಿದ್ದು ಬಣಕ್ಕೆ ಪ್ರತಿಷ್ಠೆಯ ಕಣವಾಗಲಿದೆ ಮತ್ತು ಇವರಿಬ್ಬರ ನಡುವಿನ ಬಿರುಕು ಕಂದಕದ ರೂಪ ತಾಳುವುದು ನಿಶ್ಚಿತ ಎಂದು ಬಿಜೆಪಿ ಹೇಳಿದೆ.