ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ “ಕೈ” ಕೊಡಲು ಸದಾ ಸಿದ್ದ ದಿವಾಳಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಟ್ವೀಟ್ ಮಾಡಿ ಆರೋಪಿಸಿದೆ.

ಕೆ.ಎಸ್.ಆರ್.ಟಿ.ಸಿ & ಬಿಎಂಟಿಸಿ ಸಿಬ್ಬಂದಿಗಳಿಗೆ ಭ್ರಷ್ಟ ಕಾಂಗ್ರೆಸ್ ಸರ್ಕಾರ 1750 ಕೋಟಿ ಅರಿಯರ್ಸ್ ಹಣ ಹಾಗೂ 399.29 ಕೋಟಿ ಗ್ರಾಚ್ಯುಟಿ ಹಣ ಬಾಕಿ ಉಳಿಸಿಕೊಂಡಿದೆ. ಸಾಲದ್ದಕ್ಕೆ 2024 ಜನವರಿಯಿಂದ ಹೆಚ್ಚಿಸಬೇಕಾಗಿದ್ದ ವೇತನವನ್ನು ಇದುವರೆಗೂ ಹೆಚ್ಚಿಸಿಲ್ಲ!! ಎಂದು ಬಿಜೆಪಿ ದೂರಿದೆ.

- Advertisement - 

ಸಾರಿಗೆ ಸಂಸ್ಥೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಲಾಭದಲ್ಲಿದೆ ಎಂದು ಸುಳ್ಳಾಡುವ ಮಹಾನ್ ಸುಳ್ಳುಗಾರ ಸಾರಿಗೆ ಸಚಿವ ಆರ್.ರಾಮಲಿಂಗರೆಡ್ಡಿ  ಅವರೆ, ಸಿಬ್ಬಂದಿಗಳ ಅರಿಯರ್ಸ್ ಹಾಗೂ ಗ್ರಾಚ್ಯುಟಿ ಹಣ ನೀಡಲು ಸರ್ಕಾರದ ಬಳಿ ಹಣ ಇಲ್ಲವೇ..?? ಎಂದು ಬಿಜೆಪಿ ಪ್ರಶ್ನಿಸಿದೆ.

 

- Advertisement - 

Share This Article
error: Content is protected !!
";