ರಾಜ್ಯದ ಪೊಲೀಸ್‌ಠಾಣೆಗಳು ಕಾಂಗ್ರೆಸ್‌ಕಚೇರಿಯಂತಾಗಿವೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ವಾಟ್ಸ್ಯಾಪ್‌ಗ್ರೂಪ್‌ಗಳ ಅಡ್ಮಿನ್‌ಗಳ ಮೇಲೆ ಎಫ್‌ಐಆರ್‌ದಾಖಲಿಸುವ, ಬಂಧಿಸುವ ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್‌ಸರ್ಕಾರ ನಾಂದಿ ಹಾಡಿದೆ. ರಾಜ್ಯದ ಪೊಲೀಸ್‌ಠಾಣೆಗಳು ಕಾಂಗ್ರೆಸ್‌ಕಚೇರಿಯಂತಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.

ವಿನಯ್‌ಸೋಮಯ್ಯ ಅವರ ಪ್ರಕರಣದಲ್ಲಿ ಶಾಸಕರ ಹೆಸರನ್ನು ಸೇರಿಸಲೇ ಬೇಕು, ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಪೊಲೀಸ್‌ಇಲಾಖೆ ಮತ್ತು ಸರ್ಕಾರವೇ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

 ಕೊಡಗಿನ ಗೋಣಿಮರೂರಿನಲ್ಲಿ ಶನಿವಾರ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ವಿನಯ್ ಸೋಮಯ್ಯ ಅವರ ನಿವಾಸಕ್ಕೆ ತೆರಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ನಮ್ಮ ಪಕ್ಷದ ನಿಷ್ಠೆಯ ಹಾಗೂ ಪ್ರಾಮಾಣಿಕ ಕಾರ್ಯಕರ್ತನನ್ನು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬೆದರಿಕೆ ಹಾಗೂ ಒತ್ತಡ ಹೇರಿರುವುದು ಅತ್ಯಂತ ಖಂಡನೀಯ.

ಸದ್ಯ ಕುಶಾಲನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಬೀಡು ಬಿಟ್ಟಿದ್ದು ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿರುವ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಅವರ ಹೆಸರುಗಳನ್ನು FIR ನಲ್ಲಿ ಸೇರಿಸುವಂತೆ ಹೋರಾಟ ಮುಂದುವರಿಸಲಾಗಿದ್ದು ಈ ಸರ್ಕಾರ ನಮ್ಮನ್ನು ಬಂಧಿಸಿದೆ. ವಿನಯ್ ಸೋಮಯ್ಯ ಅವರ ಸಾವಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಸಂಸದರಾದ ಯಧುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಶ್ರೀಮತಿ ಸುಜಾ ಕುಶಾಲಪ್ಪ, ಶಾಸಕರಾದ ಶ್ರೀ ವತ್ಸ, ಮಾಜಿ ಶಾಸಕರಾದ  ಕೆ.ಜಿ.ಬೋಪಯ್ಯ, ಮಾಜಿ ಸಂಸದರಾದ ಪ್ರತಾಪ್ ಸಿಂಹ,

ರಾಜ್ಯ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್, ಜಿಲ್ಲಾಧ್ಯಕ್ಷ ಎಲ್ ನಾಗೇಂದ್ರ,  ಎಲ್.ಆರ್.ಮಹದೇವಸ್ವಾಮಿ, ರವಿ ಕಾಳಪ್ಪ ಸೇರಿದಂತೆ ಪಕ್ಷದ ಪ್ರಮುಖರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

Share This Article
error: Content is protected !!
";