ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನತೆಯ ಹಾಗೂ ಮಾಧ್ಯಮಗಳ ಗಮನವನ್ನು ತಮ್ಮ ಫೋಟೋ ಹುಚ್ಚಿನಿಂದಾದ ಕಾಲ್ತುಳಿತದ ಘಟನೆಯಿಂದ ಬೇರೆಡೆ ಸೆಳೆಯಲು ಕೊಲೆಗಡುಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೂಡಿರುವ ತಂತ್ರಗಳು!! ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಕೊಲೆಗಡುಕ ಸಿಎಂ ಹಾಗೂ ಡಿಸಿಎಂ ಅವರ ದೆಹಲಿ ಪ್ರವಾಸ, ಸಂಪುಟ ಪುನರ್ ರಚನೆ, ಮತ್ತೊಮ್ಮೆ ಜಾತಿಗಣತಿ ನಡೆಸಲು ತೀರ್ಮಾನ, ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರ ಕಾಂಗ್ರೆಸ್ ಎಂತಹ ಗೋಸುಂಬೆ ಆಟ ಆಡಿದರೂ, ಜನತೆ ಮಾತ್ರ ಕಾಂಗ್ರೆಸ್ ನ ಕೊಲೆಗಡುಕತನವನ್ನು ಎಂದಿಗೂ ಮರೆಯುವುದಿಲ್ಲ!! ಎಂದು ಅಶೋಕ್ ಟೀಕಿಸಿದ್ದಾರೆ.