ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ರಾಜ್ಯದಲ್ಲಿ ಅತಿ ಎತ್ತರ ಶಿಖರ ಮುಳ್ಳಯ್ಯನಗಿರಿ
ಕರ್ನಾಟಕದಲ್ಲಿ ನಿಸರ್ಗ ಪ್ರಯೋಗ ತಾಣವು ಎಂಬಂತಿದೆ ಚಿಕ್ಕಮಗಳೂರು ಜಿಲ್ಲೆಯ ಪ್ರಾಕೃತಿಕ ಸೊಬಗು ಜಿಲ್ಲೆಯಲ್ಲಿ ಗಿರಿಕಂದರಗಳು ನದಿ ಜಲಗಳು ಶ್ರೇಣಿಗಳಿಂದ ಆವೃತವಾಗಿದ್ದು ಮುಗಿಲೆತ್ತರದ ವನರಾಜ ವಿವಿಧ ಪ್ರಾಣಿ ಸಂಕುಲಗಳನ್ನು ತಾಣವಾಗಿದೆ.ಕರ್ನಾಟಕದ ಪ್ರಕೃತಿ ಸಂಪತ್ತಿನ ಕಣಜವಾಗಿದೆ ಚಿಕ್ಕಮಗಳೂರುಣ ಜಿಲ್ಲೆ .
ಸೊಬಗಿನ ತವರೂ ಚಿಕ್ಕಮಗಳೂರು ನಿಸರ್ಗದತ್ತವಾದ ನಿತ್ಯ ಹರಿದ್ವರ್ಣ ಕಾಡುಗಳು, ಜೀವ ನಧಿಗಳು, ಘಟ್ಟ ಪ್ರದೇಶಗಳು, ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶವಾದ. ಮುಳ್ಳನಗಿರಿ ಚಿಕ್ಕಮಗಳೂರು ಚೆಲುವ ಕನ್ನಡಾಂಬೆಯ ಸೊಬಗಿನ ತವರು.
ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಅತ್ಯಂತ ಎತ್ತರವಾದ ಪಶ್ಚಿಮ ಘಟ್ಟಗಳು ಹಬ್ಬಿದ್ದು, ದಕ್ಷಿಣ ಕನ್ನಡ ಜಿಲ್ಲೆಗೂ ಚಿಕ್ಕಮಗಳೂರು ಜಿಲ್ಲೆಗೂ ಮಧ್ಯ ಗೋಡೆಯನ್ನು ನಿರ್ಮಿಸಿದಂತಿದೆ. ಅದೇ ರೀತಿ ಜಿಲ್ಲೆಯ ಮಧ್ಯದಲ್ಲಿ ಹಾದು ಹೋಗುವ ಪ್ರಖ್ಯಾತವಾದ ಮುಳ್ಳಯ್ಯನಗಿರಿ ಹಾಗೂ ಚಂದ ದ್ರೋಣ ಪರ್ವತ ಮಲ್ನಾಡು ಮತ್ತು ಮೈದಾನ ಪ್ರದೇಶಗಳನ್ನು ಬೇರ್ಪಡಿಸುವ ಗೋಡೆಯಂತಿದ್ದು ಅನೇಕ ಶಿಖರಗಳನ್ನು ಒಳಗೊಂಡಿದೆ.
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಹಚ್ಚಹಸಿರಿನ ಕಾಡಿನ ನಡುವೆ ಸರ್ಪ ದಾರಿಯಲ್ಲಿ 24 ಕಿಲೋಮೀಟರ್ ಪ್ರಯಾಣಿಸಿದರೆ ಸಿಗುವುದೇ ರಾಜ್ಯದಲ್ಲಿ ಅತಿ ಎತ್ತರದ ಮುಳ್ಳಯ್ಯನಗಿರಿ ಶಿಖರ ನಿಮ್ಮನ್ನು ಕೈಬೀಸಿ ಕರೆಯುತ್ತದೆ.
ಜೂನ್ ತಿಂಗಳು ಪ್ರಾರಂಭದಲ್ಲಿ ಮಂಜಿನಿಂದ ಆವರಿಸಿರುತ್ತದೆ, ಕ್ಷಣ ಕ್ಷಣಕ್ಕೂ ಅತಿ ಎತ್ತರದ ಶಿಖರದ ಸ್ವರ್ಗ ತೆರೆದುಕೊಳ್ಳುತ್ತದೆ, ಇದನ್ನು ಪ್ರವಾಸಿಗರು ನೋಡುವುದೇ ಒಂದು ರೋಮಾಂಚನ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಸಮುದ್ರ ಮಟ್ಟದಿಂದ ಅತಿ ಎತ್ತರದ ಅಂದರೆ 6317 ಎತ್ತರದ ಶಿಖರ ಮುಳ್ಳಯ್ಯನಗಿರಿ ದಟ್ಟ ಹಸಿರಿನ ಹರಿಕೆ ಚುಮುಚುಮು ಚಳಿಯ ಮಂಜು ತೇಲಿ ಬರುವ ತಂಗಾಳಿಯ ಲಾಸ್ಯ.
ಮನಸಳೆಯುವ ಸುಂದರ ದೃಶ್ಯಾವಳಿಗಳು ಮನಮೋಹಕ ಜಗತ್ತು ಕಣ್ಮುಂದೆ ನಿಲ್ಲುತ್ತದೆ ಹೀಗೆ ಗಿರಿಗೆ ಸಾಗುವ ಅಕ್ಕ ಪಕ್ಕದಲ್ಲಿ ಸಣ್ಣ ,ಸಣ್ಣ ಜರಿಗಳು 900 ವರ್ಷಗಳ ಹಿಂದೆ ಸಿದ್ದರೂ ತಪಸ್ಸು ಮಾಡಿದ ಕುರುಹುಗಳು ಇಲ್ಲಿ ಕಂಡುಬರುತ್ತವೆ.
ಕಾಫಿ ನಾಡು ಚಿಕ್ಕಮಗಳೂರಿಗೆ ಬಂದ ಪ್ರವಾಸಿಗರು ಈ ಪ್ರದೇಶವನ್ನು ನೋಡದೆ ಹೋಗುವುದಿಲ್ಲ. ಪ್ರಕೃತಿ ನಾಡು ಚಿಕ್ಕಮಗಳೂರು ಇಲ್ಲಿನ ಪ್ರಕೃತಿ ಎಂತವರನ್ನು ಕೈಬೀಸಿ ಕರೆಯುತ್ತದೆ ಅದರಲ್ಲೂ 1317 ಅಡಿ ಎತ್ತರದಲ್ಲಿರವ ಶಿಖರ ಏರಿದರೆ ನಿಮಗೆ ರೋಮಾಂಚನ ಹಾಗೂ ಪ್ರಕೃತಿಯ ಸ್ವರ್ಗವೇ ನಿಮಗೆ ಮುದ ನೀಡುತ್ತದೆ.
ಚಿಕ್ಕಮಗಳೂರಿನಿಂದ 24 ಕಿಲೋಮೀಟರ್ ಹೋಗುವ ರಸ್ತೆ, ಸರ್ಪ ದಾರಿಯಂತಿದೆ ಎರಡು ವಾಹನಗಳು ಚಲಿಸಲು ಹರ ಸಾಹಸ ಮಾಡಬೇಕಾಗುತ್ತದೆ. ಹೊಸದಾಗಿ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ. ಅಕ್ಕ ಪಕ್ಕದಲ್ಲಿ ಸಾವಿರ ಅಡಿ ಕಂದರಗಳು ಕಂಡುಬರುತ್ತದೆ. ನೀವು ಡ್ರೈವಿಂಗ್ ನಲ್ಲಿ ಸ್ವಲ್ಪ ಯಾಮಾರಿದರು ನಿಮಗೆ ನಮ್ಮ ದೇಹ ಸಿಗುವುದು ಕಷ್ಟ, ಅಷ್ಟು ದುರ್ಗಮ ಗುಡ್ಡಗಾಡು ಪ್ರದೇಶ ಇದಾಗಿದೆ.
ವಾಹನದಲ್ಲಿ ಕೆಳಗಿಳಿಯುತ್ತಿದ್ದಂತೆ ಚುಮುಚುಮು ಚಳಿ ಹಾಗೂ ವೇಗವಾಗಿ ಬೀಸುವ ಗಾಳಿ ನಿಮ್ಮನ್ನು ಎತ್ತಿ ಬಿಸಾಕು ಒಂತಿರುತ್ತದೆ. ಬೇಸಿಗೆ ಮುಗಿದಾಗ ಮಳೆಗಾಲದಲ್ಲಿ ಒಂದಿಷ್ಟು ಬೆಚ್ಚನೆಯ ಜರ್ಕಿನ್ ಸ್ವೆಟರ್ ಹಾಗೂ ಟೋಪಿ ಇನ್ನು ಕೆಲವರು ಸೀತ ಆಗದವರು ಕೈಗೆ ಗ್ಲೌಸ್ ಗಳನ್ನು ತಂದರೆ ಇನ್ನು ಒಳ್ಳೆಯದು.
ಇನ್ನೇನು ಮಳೆಗಾಲ ಆರಂಭವಾಯಿತು ಎನ್ನುವ ಸಂದರ್ಭದಲ್ಲಿ ನಿಮಗೆ ಚಳಿಯನ್ನು ಅನುಭವಿಸಬೇಕು ಎಂದರೆ ನೀವು ಈ ಪ್ರದೇಶಕ್ಕೆ ಭೇಟಿ ಕೊಡಬಹುದು. ಇನ್ನು ಕೆಲವರು ಹಚ್ಚಹಸಿರನ್ನು ನೋಡಬೇಕೆಂದವರು ವರ್ಷದ ಅಕ್ಟೋಬರ್, ನವೆಂಬರ್ ತಿಂಗಳ ಮಧ್ಯದಲ್ಲಿ ಪ್ರವಾಸ ಮಾಡಿದರೆ ಹಟ್ಟಹಸಿರಿನ ಹೊದಿಕೆ ನಿಮ್ಮನ್ನು ಮನಸೆಳೆಯುತ್ತದೆ. ಸುಮಾರು ಒಂದು ಸಾವಿರ ಮೆಟ್ಟಲುಗಳನ್ನು ಹತ್ತಬೇಕು.
ದೇಶ ರಾಜ್ಯದ ಮೂಲೆ ಮೂಲೆಯಿಂದ ಬರುವ ಪ್ರವಾಸಿಗರು ಯಾವಾಗಲೂ ಕೂಡ ತುಂಬಿ ತುಳುಕುತ್ತಿರುತ್ತಾರೆ. ಇದರ ನಡುವೆ ಕೆಳಭಾಗದಲ್ಲಿ ಪಾರ್ಕಿಂಗ್ ಮಾಡಿ 6317 ಅಡಿ ಎತ್ತರಕ್ಕೆ ಹೋಗಬೇಕಾದರೆ ನಿಮಗೆ ಸುಮಾರು ಒಂದು ಸಾವಿರ ಮೆಟ್ಟಿಲುಗಳು ಕಂಡುಬರುತ್ತದೆ. ಮಂಜು ಯಾವಾಗಲೂ ಮುಸುಕಿನಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ನಿಮಗೆ ಬೆಳಗಿನ ಜಾವ ಮೆಟ್ಟಿಲು ಹತ್ತುವುದು ಕಷ್ಟ ಎನ್ನುವುದಿಲ್ಲ, ಆದರೆ ಕೆಲವರಿಗೆ ಸ್ವಲ್ಪ ತ್ರಾಸು ಕೊಡುತ್ತದೆ. ಬೆಟ್ಟದ ಮೇಲೆ ಮುಳ್ಳಯ್ಯನ ಗದ್ದಿಗೆ ಇದ್ದು ಮುಳ್ಳಪ್ಪ ಸ್ವಾಮಿ ಪೂಜೆ ದಿನನಿತ್ಯ ನಡೆಯುತ್ತದೆ. ನೀವು ಮುಂಚೆಯೇ ಈ ದೇವಸ್ಥಾನಕ್ಕೆ ಹೇಳಿದರೆ ನಿಮಗೆ ತಂಪಾದ ರಾಗಿ ಅಂಬಲಿ (ರಬ್ಳಿಗೆ ) ದೊಂದಿಗೆ ಪ್ರಸಾದ ಕೂಡ ಸಿಗುತ್ತದೆ.
ಶಿಖರದ ಮೇಲೊಂದು ವಿಂಗಮನ ನೋಟ-
ಕರ್ನಾಟಕದ ಅತಿ ಎತ್ತರದ ಶಿಖರವನ್ನು ಏರಿದಾಗ ಪ್ರಕೃತಿ ನಿಮಗೆ ಅವಕಾಶ ಕೊಟ್ಟರೆ ಮಂಜು ಸರಿದು ನಂತರ ಚಿಕ್ಕಮಗಳೂರಿನ ಜಿಲ್ಲಾ ಕೇಂದ್ರವು ಸೇರಿದಂತೆ ಸುಮಾರು 46 km ದೂರದಲ್ಲಿರುವ ಬೇಲೂರು ನಗರ ಕೂಡ ನಿಮಗೆ ನೋಡಲು ಸಿಗುತ್ತದೆ. ಮತ್ತೊಂದು ಇಲ್ಲಿನ ವಿಶೇಷವೆಂದರೆ ಈ ಪ್ರದೇಶ ಚಾರಿಣಿಗರ ಸ್ವರ್ಗ (ಟ್ರಕಿಂಗ್) ಎಂದು ಕರೆಯಲಾಗುತ್ತದೆ.
ಕಾಫಿ ನಾಡು ಹಲವು ಅದ್ಭುತಗಳನ್ನು ನೀಡುತ್ತದೆ.-
ಹಚ್ಚಹಸಿರಿಂದ ಕಂಗೊಳಿಸುತ್ತಿರುವ ಕಾಫಿ ನಾಡು ಹಲವು ಅದ್ಭುತಗಳನ್ನು ನಿಮಗೆ ನೀಡುತ್ತದೆ. ಗಿರಿಧಾಮಗಳಿಂದ ಕೂಡಿರುವ ಪ್ರಕೃತಿ ಪ್ರಿಯರನ್ನು ವರ್ಷವಿಡಿ ತನ್ನಡೆಗೆ ಆಕರ್ಷಿಸುತ್ತದೆ.
ಹಸಿರನ್ನು ಒದ್ದು ಮಲಗಿರುವ ಈ ಜಿಲ್ಲೆಯ ಏಕಾಂತತೆಯನ್ನು ಪಡೆಯಲು ಜೀವನದ ಜಂಜಾಟಕ್ಕೆ ಬ್ರೇಕ್ ಹಾಕಿ ವಿಶ್ರಾಂತಿ ಪಡೆಯಲು ಬರುವ ಸೂಕ್ತ ಸ್ಥಳ ಇದಾಗಿದೆ.
ಜಿಲ್ಲಾಯಾಧ್ಯಂತ ಬೆಟ್ಟ ಗುಡ್ಡಗಳಿಂದ ಕೂಡಿರುವ ಈ ಪ್ರದೇಶವು ಪ್ರವಾಸಿಗರಿಗೆ ಬೇಸಿಗೆಯಲ್ಲೂ ತಂಪಾದ ವಾತಾವರಣವನ್ನು ನೀಡುತ್ತದೆ. ಅಲ್ಲಲ್ಲಿ ಕಂಡು ಬರುವ ಸಣ್ಣ ಸಣ್ಣ ಜರಿಗಳು ಹಾಗೂ ಮುಗಿಲೆತ್ತರದ ಮರಗಳು, ಇಲ್ಲಿನ ಹಸಿರು ಹುಲ್ಲಿನ ಹೊದಿಕೆ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರವಾಸಿಗರಿಗೆ ಮುದ ನೀಡುತ್ತದೆ.
ಅನೇಕ ದಂತ ಕಥೆಗಳು-
ನೀವು ಈ ಪ್ರಕೃತಿ ಸ್ವರ್ಗದ ನಡುವೆ ಮುಳ್ಳಿಯನ ಗಿರಿಗೆ ಪ್ರವಾಸ ಹೋಗುವಾಗ ಅಕ್ಕ ಪಕ್ಕದಲ್ಲಿ ಬೆಟ್ಟದ ತುದಿಯಿಂದ ಹತ್ತಾರು ಜರಿಗಳು ಹರಿಯುತ್ತಾ ನಿಮ್ಮ ಮನಸ್ಸಿಗೆ ಉಲ್ಲಾಸಕೊಡುತ್ತದೆ. ಇಲ್ಲಿ ಸಾವಿರಾರು ಗಿಡಮೂಲಿಕೆಗಳು ಕಂಡುಬಂದಿದ್ದು ಇದನ್ನು ಚಂದ್ರಗ್ರಹಣ ಪರ್ವತ ಎಂದು ಕೂಡ ಕರೆಯುತ್ತಾರೆ.
ಆಂಜನೇಯ ಹೊತ್ತು ತಂದ ಸಂಜೀವಿನಿ ಬೆಟ್ಟ-
ಮೊದಲೇ ಹೇಳಿದಂತೆ ಚಿಕ್ಕಮಗಳೂರಿನ ಮೋಡದಿಂದ ಸರ್ಪದ ಹಾದಿಯಲ್ಲಿ ಸಾಗುವ ರಸ್ತೆ ಅಕ್ಕಪಕ್ಕದಲ್ಲಿ ಹರಿಯುವ ಜರಿಗಳು ನಿಮಗೆ ಕಂಡುಬರುತ್ತದೆ ಇದರ ಮತ್ತೊಂದು ವಿಶೇಷ ಎಂದರೆ ರಾಮಾಯಣ ಕಾಲದಲ್ಲಿ ಲಕ್ಷ್ಮಣ ಯುದ್ಧದಲ್ಲಿ ಮೂರ್ಛೆ ಹೋದಾಗ ಆಂಜನೇಯ ಸಂಜೀವಿನಿ ಮೂಲಿಕೆಗಾಗಿ ಪರ್ವತವನ್ನು ಹೊತ್ತುಕೊಂಡು ಹೋಗಿ ಸಂಜೀವಿನಿ ಪಡೆದು ನಂತರ ತಂದು ಈ ಪರ್ವತವನ್ನು ತಲೆಕೆಳಗಾಗಿ ಬಿಸಾಕಿದ ಎಂದು ಹೇಳಲಾಗುತ್ತದೆ. ಹಾಗಾಗಿ ಜಲವೆಲ್ಲ ಮೇಲ್ಭಾಗದಲ್ಲಿದ್ದು ಅಲ್ಲಿಂದ ಕೆಳಭಾಗಕ್ಕೆ ಹರಿಯುತ್ತದೆ ಹಾಗಾಗಿ ಇದನ್ನು ಜಲ ಮೇಲಗಿರಿ ಪರ್ವತ ಹಾಗೂ ಆಂಜನೇಯ ಸಂಜೀವಿನಿ ಪರ್ವತವೆಂದು ಕೂಡ ಕರೆಯುತ್ತಾರೆ.
ಪವಿತ್ರ ನೀರು ಯಾವುದೇ ಮಿನರಲ್ ವಾಟರಿಗಿಂತ ಕಡಿಮೆ ಇಲ್ಲ-
ನೀವು ಈ ಗಿರಿ ಪ್ರದೇಶದ ಪ್ರವಾಸಕ್ಕೆ ಬಂದಾಗ ಇಲ್ಲಿ ಹರಿಯುವ ಜರಿಗಳ ನೀರನ್ನು ಬೋಗಸಿಯಲ್ಲಿ ಕುಡಿರಿ ಯಾವುದೇ ಕಲ್ಮಶವಿಲ್ಲ. ತಿಳಿತಿಳಿಯಾಗಿ ಹಚ್ಚಹಸಿರಿನಿಂದ ಹರಿದು ಬರುತ್ತಾ ಶುದ್ಧ ನೀರು ನಿಮಗೆ ಸಿಗುತ್ತದೆ. ಇದರ ಮುಂದೆ ಯಾವುದೇ ಮಿನರಲ್ ವಾಟರ್ ಬೇಕಾಗಿಲ್ಲ.
ಇಷ್ಟೆಲ್ಲಾ ಅದ್ಭುತ ಗಳನ್ನು ಹೊಂದಿರುವ ರಾಜ್ಯದಲ್ಲಿ ಅತಿ ಎತ್ತರವಾದ ಶಿಖರ ಮುಳ್ಳಯ್ಯ ಗಿರಿ ಎಂದು ಹೆಸರು ಬರಲು 900ವರ್ಷಗಳ ಹಿಂದೆ ಮುಳ್ಳಪ್ಪ ಸ್ವಾಮಿ ಎಂಬುವರು ತಪಸ್ಸು ಮಾಡಿದ ಜಾಗ ಕೂಡ ಇದಾಗಿದ್ದು. ಹಾಗಾಗಿ ಈ ಶಿಖರಕ್ಕೆ ಮುಳ್ಳಯ್ಯನಗಿರಿ ಎಂದು ಕರೆಯಲಾಗುತ್ತದೆ.
ಈ ಪ್ರಕೃತಿ ಸೌಂದರ್ಯ ನಡುವೆ ಇರುವ ರಾಜ್ಯದಲ್ಲಿ ಅತಿ ಎತ್ತರದ ಶಿಖರ ಎಂದು ಖ್ಯಾತಿಗಳಿಸಿರುವ ಮುಳ್ಳಯ್ಯನಗಿರಿ ಸ್ನೇಹಿತರು, ಸಂಸಾರಸ್ಥರೊಂದಿಗೆ ಒಮ್ಮೆ ಭೇಟಿಕೊಟ್ಟು ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಿ ಹಾಗೂ ಇಲ್ಲಿನ ಸ್ವಚ್ಛ ಗಾಳಿ, ಸ್ವಚ್ಛ ಪರಿಸರ ,ಪ್ರಕೃತಿ ಸೌಂದರ್ಯ ಪಡೆದು ಎಂಜಾಯ್ ಮಾಡಿ.
ಲೇಖನ-ಜಿ.ಎಂ. ರಾಜಶೇಖರ್. ಪತ್ರಕರ್ತರು. ಚಿಕ್ಕಮಗಳೂರು.