ಚಂದ್ರವಳ್ಳಿ ನ್ಯೂಸ್, ಪಾವಗಡ:
ತುಮಕೂರು ಜಿಲ್ಲೆಯ ಪಾವಗಡ ನಗರದಲ್ಲಿರುವ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆಯನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಸಲಾಯಿತು.
ತುಮಕೂರು ಜಿಪಂ ಸಿಇಒ ಪ್ರಭು.ಜಿ ಮಾತನಾಡಿ ಸಿಎಂ ಕಾರ್ಯಕ್ರಮದಲ್ಲಿ 2800 ನಿವೇಶನಗಳನ್ನು ವಿತರಣೆ ಮಾಡಲು ಗುರಿ ನಿಗದಿ ಮಾಡಿದ್ದು ಗುರಿ ಸಾಧನೆಗೆ ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶವನ್ನು ವಿತರಣೆ ಮಾಡಲು 3000 ನಿವೇಶನದ ಗುರಿ ಹೊಂದಿದೆ. ಈಗಾಗಲೇ ಕೆಲವು ಖಾಲಿ ನಿವೇಶನಗಳನ್ನು ಸಮತಟ್ಟು ಮಾಡಿಸಿ ಅದನ್ನು ಸೈಟು ಫಾರ್ಮೇಶನ್ ಮಾಡಲಾಗಿದೆ ಎಂದು ತಿಳಿಸಿದರು.
ನಿವೇಶನ ರಹಿತರ ಪಟ್ಟಿ ತಯಾರಿಸಿ ಪಾರದರ್ಶಕವಾಗಿ ನಿವೇಶನಗಳನ್ನು ವಿತರಣೆ ಮಾಡಬೇಕು. ಆಯ್ಕೆ ಪ್ರಕ್ರಿಯೆ ಪಾರದರ್ಶಕತೆಯಿಂದ ಕೊಡಿರಬೇಕು ಜಿಲ್ಲಾ ಮಟ್ಟದ ಅಧಿಕಾರಿ ಒಬ್ಬರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸದಸ್ಯರು ನೇತೃತ್ವದಲ್ಲಿ ನಡೆಯಲಾಗಿದೆ.
ಈ ಸಭೆಯಲ್ಲಿ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಇದರ ಮೂಲ ಗುರಿ ನಿಜವಾದ ಅನರ್ಹ ಫಲಾನುಭವಿಗಳಿಗೆ ನಿವೇಶನವನ್ನು ಒದಗಿಸುವುದಾಗಿದೆ. ನಂತರ ತಾಲೂಕಿನ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು. ಕಾಮಗಾರಿಗಳು ಸೂಕ್ತವಾಗುತ್ತಿದ್ದರೆ ತಾಲ್ಲೂಕಿನಲ್ಲಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಉತ್ತಮ ಕಾಮಗಾರಿಗಳನ್ನು ಮಾಡುವವರಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡಿಸಿ ನಂತರ ಕಾಮಗಾರಿ ಸೂಕ್ತವಾಗಿ ಅನುಷ್ಠಾನ ಮಾಡಲು ವಿಫಲರಾದರೆ ಕ್ರಮ ಕೈ ಗೊಳ್ಳುವುದಾಗಿ ಸೂಚಿಸಿದರು.
ಕೂಲಿ ಆಧಾರದ ಕಾಮಗಾರಿಗಳನ್ನು ಮಾಡುವಲ್ಲಿ ಜಿಲ್ಲೆಯಲ್ಲಿ ಪಾವಗಡ ತಾಲ್ಲೂಕು ಮೊದಲಿನ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. ನಂತರ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಮೂಲ ಭೂತ ಸೌಕರ್ಯಗಳನ್ನು ಪಂಚಾಯಿತಿಯಲ್ಲಿ ಒದಗಿಸುವುದು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿದಿರುತ್ತಾರೆ.
ತಾಲೂಕಿನಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಪ್ರಭು ಜಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಕಾರದರ್ಶಿ(ಅಭಿವೃದ್ಧಿ) ಸಂಜೀವಪ್ಪ, ಮುಖ್ಯ ಕಾರ್ಯಪಾಲಕ ಕುಮಾರಸ್ವಾಮಿ, ತಾಲೂಕ್ ಪಂಚಾಯತಿ ಕಾರ್ಯಾನಿರ್ವಾಹಣಾಧಿಕಾರಿ ಜಾನಕಿ ರಾಮ್ ಹಾಗೂ ಇನ್ನೂ ಮುಂತಾದ ತಾಲೂಕು ಪಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದರು.