ಕೆರೆ ಹೂಳೆತ್ತುವ ಕಾರ್ಯ ಶ್ಲಾಘನೀಯ-ಧೀರಜ್ ಮುನಿರಾಜು 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಹಾದ್ರಿಪುರ ಗ್ರಾಮ ಪಂಚಾಯತ್ ರಾಮೇಶ್ವರ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ರಾಮೇಶ್ವರ ಗ್ರಾಮದ ರಾಮೇಶ್ವರ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ ಆಗಿದ್ದು ಇಂದು ನಾಮಫಲಕ ಅನಾವರಣ
, ಬಾಗಿನ ಅರ್ಪಣೆ, ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ದೊಡ್ಡಬಳ್ಳಾಪುರ ತಾಲ್ಲೂಕು ಶಾಸಕರಾದ ಧೀರಜ್ ಮುನಿರಾಜು ನಾಮಫಲಕ ಅನಾವರಣ ಮಾಡುವ ಮೂಲಕ ಶುಭ ಹಾರೈಸಿದರು. 

ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಶಾಸಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೆರೆ ಹೂಳೆತ್ತುವ ಕಾರ್ಯಕ್ರಮ ವಿಶೇಷ ಕಾರ್ಯಕ್ರಮ ಆಗಿದ್ದು ರಾಮೇಶ್ವರ ಕೆರೆ ಉತ್ತಮವಾಗಿ ಕಾಮಗಾರಿ ಆಗಿರುತ್ತದೆ ಎಂದರು. 

ದೊಡ್ಡಬಳ್ಳಾಪುರ ತಾಲ್ಲೂಕು ಮಳೆಯಾಶ್ರಿತ ಪ್ರದೇಶ‌ಆದ್ದರಿಂದ ನದಿಗಳು ಇಲ್ಲದೆ ಇರುವುದರಿಂದ ಸಿಹಿ ನೀರಿಗೆ ಅಭಾವವಿದೆ.

ಕೇವಲ ಬೊರ್ವೆಲ್ ನೀರನ್ನು ಬಳಸಿ ಕೃಷಿ ಮಾಡುತ್ತಿದ್ದು ಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಕುಸಿತ ವಾಗುತ್ತಿದ್ದು, ನೀರಿಗೆ ಅಭಾವವಾಗುತ್ತಿದೆ.

ತಾಲೂಕಿನಲ್ಲಿ ರಾಗಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು ನೀರಿಗೆ ಸಮಸ್ಯೆ ಆಗುವ ಮೊದಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ಹೆಚ್ಚಿನ ಕೆರೆ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಂಡು ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು. 

ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಸರ್ ಮಾತನಾಡಿ ತಾಲೂಕಿನಲ್ಲಿ 10 ಕೆರೆಗಳನ್ನು ಹೂಳೆತ್ತಲಾಗಿದ್ದು ವಾರ್ಷಿಕ 1ರಿಂದ 2 ಕೆರೆ ಹೂಳೆತ್ತುವ ಕಾರ್ಯಕ್ರಮ ಮಾಡಲಾಗುವುದು. 

ರಾಮೇಶ್ವರ ಕೆರೆಗೆ ಯಾವುದೇ ಗಲೀಜು ನೀರು ಬರದಂತೆ ತಡೆಯಬೇಕು,ಕಸ ಇತ್ಯಾದಿ ಗಳನ್ನು ಕೆರೆಗೆ ಹಾಕುವುದನ್ನು ನಿಷೇಧಿಸಬೇಕೆಂದು ಗ್ರಾಮಪಂಚಾಯತ್ ಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ಕೆರೆ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವನಂದ್ ಪಂಚಾಯತ್ ಸಧಸ್ಯರಾದ ಮುನಿಲಕ್ಷಮ್ಮ, ಡೈರಿ ಅಧ್ಯಕ್ಷ ಅಶ್ವತ್ ನಾರಾಯಣ, ಗ್ರಾಮದ ಹಿರಿಯರಾದ ಕೃಷ್ಣಪ್ಪ, ಶಿವಣ್ಣ , ಮುನಿ ಲಕ್ಷ್ಮಮ್ಮ, ಗಂಗರಾಜು, ಪ್ರಕಾಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಮೇಲ್ವಿಚಾರಕ ಲೋಹಿತ್, ವಲಯ ಮೇಲ್ವಿಚಾರಕಿ ಅನ್ನಪೂರ್ಣ, ನೋಡೆಲ್ ರೇಣುಕಾ ಪ್ರಸಾದ್, ಸೇವಾಪ್ರತಿನಿಧಿಗಳಾದ ಸಾಕಮ್ಮ,ಅನುಸೂಯ, ನಾಗರತ್ನ  ಹಾಗೂ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

 

 

Share This Article
error: Content is protected !!
";