ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ ಉಕ್ಕು ಮತ್ತು ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅವರ ಸಹೋದರ ಹೆಚ್.ಡಿ.ರೇವಣ್ಣ ಅವರು ತನ್ನ ಹುಟ್ಟೂರು ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಶ್ರೀ ದೇವೇಶ್ವರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ವಿವಿಧ ದೇವಸ್ಥಾನಗಳಿಗೆ ಜೊತೆಯಾಗಿ ಹೋಗಿ ಪೂಜೆ ಸಲ್ಲಿಸಿದ್ದಾರೆ.
ಇದಾದ ನಂತರ ಇಬ್ಬರು ಸಹೋದರರು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದೇವರ ದರ್ಶನ ಪಡೆದರು.
ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಗ್ರಾಮದಲ್ಲಿರುವ ಗೌಡರ ಮನೆ ದೇವರಾದ ಶ್ರೀ ದೇವೀರಮ್ಮ ಅಮ್ಮನವರಿಗೆ ಪೂಜೆ ಸಲ್ಲಿಸಿದರು.
ಈ ಎಲ್ಲ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಸಹೋದರ ಹೆಚ್.ಡಿ.ರೇವಣ್ಣ ಅವರು ಜೊತೆಗಿದ್ದು ಪೂಜೆ ಸಲ್ಲಿಸಿದ್ದಾರೆ.