ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕಸಬಾ ಹೋಬಳಿ ಕಳೆದ ಶನಿವಾರ ರಾತ್ರಿ ಹಂದಿ ಶೆಡ್ ನುಗ್ಗಿದ ಕಳ್ಳರು 34 ಹಂದಿ ಮರಿಗಳ ಕಳ್ಳತನ ಮಾಡಿದ್ದು ಇಷ್ಟಕ್ಕೆ ತೃಪ್ತರಾಗದ ಕಳ್ಳರು ಸೋಮವಾರ ರಾತ್ರಿ ಅದೇ ಹಂದಿ ಶೆಡ್ ಗೆ ನುಗ್ಗಿ 17 ತಾಯಿ ಹಂದಿಗಳ ಕಳವು ಮಾಡಿದ್ದಾರೆ.
ದೊಡ್ಡಬಳ್ಳಾಪುರಕ್ಕೆ ಹತ್ತಿರವಿರುವ ಭೈರಸಂದ್ರ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು, ದಿವಾಕರ್ ಎಂಬುವರಿಗೆ ಸೇರಿದ 17 ಹಂದಿಗಳನ್ನು ಕಳವು ಮಾಡಿದ್ದಾರೆ, ಕದ್ಯೋಯುವ ಸಮಯದಲ್ಲಿ ಹೆಚ್ಚು ಹಂದಿ ಇದ್ದಕಾರಣ ವಾಹನ ಚಲಿಸದೆ ಇದ್ದಾಗ, 4 ಹಂದಿಗಳನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ.
ಮಾರ್ಚ್ 23ರ ಶನಿವಾರ ರಾತ್ರಿ 12:30 ರ ಸಮಯದಲ್ಲಿ ಹಂದಿ ಮರಿಗಳ ಕಳವು ಮಾಡಿದ ಕಳ್ಳರು ಮತ್ತೆ ಯಾವುದೇ ಭಯವಿಲ್ಲದೆ ಅದೇ ಸ್ಥಳದಲ್ಲಿ ಕಳವು ಮಾಡಿರುವುದು ಹಂದಿ ಸಾಕಾಣಿಕೆದಾರರ ಆತಂಕಕ್ಕೆ ಕಾರಣವಾಗಿದೆ, ಪೊಲೀಸರ ಭಯ ಇಲ್ಲದೆ ಇರೋದು, ಜಾನುವಾರುಗಳ ಕಳವು ಪ್ರಕರಣಗಳನ್ನು ಭೇದಿಸದೆ ಇರೋದು ಕಳ್ಳತನ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.
ಶನಿವಾರ ರಾತ್ರಿ ನಡೆದ ಕಳವು ಕೃತ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದಿರುವ ಕಳ್ಳರು 34 ಹಂದಿ ಮರಿಗಳನ್ನ ಕಳ್ಳತನ ಮಾಡಿದ್ದಾರೆ, ಯುಗಾದಿ ಹಬ್ಬದ ವರ್ಷತೊಡಕು ದಿನ ಮಾಂಸಕ್ಕೆ ಅಧಿಕ ಬೇಡಿಕೆ ಇರುವುದರಿಂದ ಕಳ್ಳರು ಯಾವುದೇ ಭಯವಿಲ್ಲದೆ ಕಳ್ಳತನ ಮಾಡಿರುವ ಸಂಶಯವಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೇಗೆ ಕಳವು ಪ್ರಕರಣ ಹೆಚ್ಚಾಗುತ್ತಿವೆ, ಸ್ವಾವಲಂಬಿ ಬದುಕನ್ನ ಕಟ್ಟಿಕೊಳ್ಳಲು ಗ್ರಾಮದಲ್ಲಿನ ಯುವಕರು ಹಂದಿ,ಕುರಿ,ಕೋಳಿ, ಮೇಕೆ ಸೇರಿದಂತೆ ಜಾನುವಾರಗಳ ಸಾಕಾಣಿಕೆ ಮಾಡುತ್ತಿದ್ದಾರೆ, ಕಳವು ಪ್ರಕರಣಕ್ಕೆ ಪೊಲೀಸರು ಬ್ರೇಕ್ ಹಾಕದೆ ಇದ್ದಲ್ಲಿ ಯುವಕರ ಸ್ವಾವಲಂಬಿ ಬದುಕಿಗೆ ಕೊಳ್ಳಿ ಇಟ್ಟಾಂತಾಗಿದೆ ಪೊಲೀಸರು ಇಂತಹ ಕಳ್ಳರಿಗೆ ಕಡಿವಾಣ ಹಾಕುವ ಮೂಲಕ ಸಮಾಜದಲ್ಲಿ ಕಳ್ಳತನ ಸುಲಿಗೆ ಮೋಸ ಮಾಡುವವರ ಕಾನೂನಿನ ಕಠಿಣವಾದ ಶಿಕ್ಷೆ ನೀಡುವ ಮೂಲಕ ಸಾಮಾನ್ಯ ಜನರಿಗೆ ನ್ಯಾಯ ಸಿಕ್ಕಂತಾಗುತ್ತದೆ.