ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದಲ್ಲಿ ಮಣ್ಣಿನ ಮಗ ಎಂಬ ಬಿರುದು ಪಡೆದಿರುವ ಏಕೈಕ ರಾಜಕಾರಣಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು. ಅವರ ಜನ್ಮದಿನಕ್ಕೆ ಹಾರ್ದಿಕ ಶುಭಾಶಯಗಳು.
ದೇವೇಗೌಡರು ಹಾಸನದ ಹೊಳೆನರಸೀಪುರ ತಾಲ್ಲೂಕಿನಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗಿ ರಾಜಕೀಯಕ್ಕೆ ಪ್ರವೇಶಿಸಿದರು. ನಂತರದಲ್ಲಿ ಹೊಳೆನರಸೀಪುರದಲ್ಲಿ ಎರಡು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದ ನಂತರ ಜಯಪ್ರಕಾಶ್ ನಾರಾಯಣ್ ಅವರ ಮಹತ್ವಾಕಾಂಕ್ಷಿ ನೀತಿಯಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಪಕ್ಷ ಕಟ್ಟಿದರು. 1985ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮವಾಗಿ ಕಾಂಗ್ರೆಸ್ ವಿರುದ್ಧ ರಾಜ್ಯದಲ್ಲಿ ಜನತಾ ಪಕ್ಷವನ್ನು ಆಡಳಿತಕ್ಕೆ ತಂದರು.
ಆ ಸಮಯದಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು ನೀರಾವರಿ ಸಚಿವರಾದ ದೇವೇಗೌಡರು ಹಲವು ನೀರಾವರಿ ಸೌಲಭ್ಯವನ್ನು ನಾಡಿಗೆ ತಂದಿರುವರು. 1994ರಲ್ಲಿ ರಾಮನಗರದಲ್ಲಿ ಶಾಸಕರಾದ ದೇವೇಗೌಡರು ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದು ಒಂದು ಇತಿಹಾಸ. ಹಲವು ಪ್ರಗತಿಪರ ಕಾರ್ಯಗಳ ಹಿನ್ನೆಲೆಯಲ್ಲಿ 1996ರ ದೇಶದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಜನತಾ ಪಕ್ಷಕ್ಕೆ 17 ಲೋಕಸಭಾ ಸಂಸದರು ಆಯ್ಕೆಯಾದರು. ಈ ವಿಚಾರವನ್ನು ಗಮನಿಸಿದ ದೇಶದ ಎಡಪಂಥೀಯ ಪಕ್ಷಗಳು ದೇವೇಗೌಡರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ತಂದರು.
ದೇವೇಗೌಡರು ಜನಸಾಮಾನ್ಯರ ಪರವಾಗಿ ಹಾಗೂ ಕೃಷಿ ಬದುಕಿನ ಪರವಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ದೇಶದ ಪಂಜಾಬ್ ರಾಜ್ಯದಲ್ಲಿ ದೇವೇಗೌಡರ ಹೆಸರಿನಲ್ಲೇ ಒಂದು ಭತ್ತದ ತಳಿ ಸಂಶೋಧಿಸಲಾಗಿದೆ. ದೇವೇಗೌಡರಲ್ಲಿರುವ ರೈತ ಕಾಳಜಿಯ ನಿಷ್ಠೆಗೆ ಮಣ್ಣಿನ ಮಗ ಬಿರುದು ಲಭಿಸಿದೆ. ದೇಶದ ರಾಜಕಾರಣದಲ್ಲಿ ಮಣ್ಣಿನ ಮಗ ಎಂಬ ಹೆಗ್ಗಳಿಕೆಯ ಬಿರುದು ಪಡೆದಿರುವ ಏಕೈಕ ರಾಜಕಾರಣಿ ಈ ವಿಚಾರದಲ್ಲಿ ನಾಡಿನ ಜನತೆಗೆ ಹೆಮ್ಮೆಯಿದೆ ಎಂದು ರಘು ಗೌಡ ತಿಳಿಸಿದ್ದಾರೆ.