ಚಂದ್ರವಳ್ಳಿ ನ್ಯೂಸ್, ವಿಜಯಪುರ:
ರಾಜ್ಯದ ಹಲವು ಹೆದ್ದಾರಿ ಟೋಲ್ ಸಂಗ್ರಹ ಕೇಂದ್ರಗಳ ಸಿಬ್ಬಂದಿಗಳಿಗೆ ಮತ್ತು ಟೋಲ್ ಬಳಕೆ ಮಾಡುವ ವಾಹನಗಳ ಚಾಲಕರು, ಮಾಲೀಕರಿಗೆ ನಿತ್ಯ ಸಂಘರ್ಷ ನಡೆಯುತ್ತದೆ.
ಭಾನುವಾರ ವಿಧಾನಪರಿಷತ್ ಸದಸ್ಯರೊಬ್ಬರು ಟೋಲ್ ಮೂಲಕ ಸಂಚರಿಸುವಾಗ ಒಂದು ಗಂಟೆಗೂ ಹೆಚ್ಚು ಕಾಲ ಟೋಲ್ ಸಿಬ್ಬಂದಿಗಳು ಎಂಎಲ್ಸಿ ಅವರನ್ನ ತಡೆದು ವಿವಾಹ ಮಾಡಿದ್ದಾರೆ.
ನೀವು ಎಂಎಲ್ಸಿ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರನ್ನು ಟೋಲ್ ಸಿಬ್ಬಂದಿ ಪ್ರಶ್ನಿಸಿ ಬರೋಬ್ಬರಿ 1 ಗಂಟೆಗಳ ಕಾಲ ತಡೆ ನಿಲ್ಲಿಸಿರುವ ಘಟನೆ ವಿಜಯಪುರ ಹೊರವಲಯದಲ್ಲಿರುವ ಟೋಲ್ ನಲ್ಲಿ ನಡೆದಿದೆ.
ಕೇಶವಪ್ರಸಾದ್ ಅವರು ಡಿಸೆಂಬರ್-21ರ ಭಾನುವಾರ ವಿಜಯಪುರಕ್ಕೆ ಹೊರಟ್ಟಿದ್ದರು. ಈ ಮಾರ್ಗದಲ್ಲಿ ಬರುವ ಟೋಲ್ ಸಿಬ್ಬಂದಿ ಕಾರು ಬಿಡದೇ ನಿಲ್ಲಿಸಿದ್ದಾರೆ.
ನೀವು ಎಂಎಲ್ಸಿ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದಾರೆ. ಇದನ್ನು ಕಾರು ಚಾಲಕ ವಿಡಿಯೋ ಮಾಡಲು ಮುಂದಾಗಿದ್ದ ವೇಳೆ ಮೊಬೈಲ್ ಕಿತ್ತುಕೊಂಡಿದ್ದಾರೆ.
ಇದರಿಂದ ಕೆಂಡಾಮಂಡಲರಾದ ಕೇಶವ ಪ್ರಸಾದ್ ಕೂಡಲೇ ವಿಜಯಪುರ ಎಸ್ಪಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಸಿಪಿಐ, ಡಿವೈಎಸ್ಪಿ ದೌಡಾಯಿಸಿ ಬಂದು ಟೋಲ್ ಸಿಬ್ಬಂದಿಗೆ ಚಳಿ ಬಿಡಿಸಿದ್ದಾರೆ. ನಂತರ ಟೋಲ್ ಸಿಬ್ಬಂದಿ ಕೇಶವ ಪ್ರಸಾದ್ ಅವರ ಕಾರು ಬಿಟ್ಟ ಘಟನೆ ನಡೆದಿದೆ.

