ಚಂದ್ರವಳ್ಳಿ ನ್ಯೂಸ್, ತುಮಕೂರು:
ಮರದ ಮನವು
ತೊಳಲಾಡುತ್ತಿರುವುದು ನಡೆ ಕಂಡು…
ಮರವೊಂದು
ನರಳುತ್ತಿರುವುದು
ನಗರ ರಸ್ತೆಯ ಬದಿಯಲ್ಲಿ
ವಾಹನಗಳ ಹೊಗೆ
ತುಂಬಿರುವುದು
ಎಲೆಗಳ ಮೇಲೆ ಕಪ್ಪು ಮಸಿಯಾಗಿ
ಬುಡದಿಂದಲೂ ಮಸಿ ಆವರಿಸಿರುವುದು
ಅಂಟು ಅಂಟಾಗಿ
ಮರವು ಮಳೆರಾಯನ ಬೇಡುತ್ತಿರುವುದು
ಮೈಯಲ್ಲ ಜಡವಾಗಿದೆ
ನೀನೊಮ್ಮೆ ಬಾ
ಸ್ವಚ್ಛತೆಯ ಮಾಡು
ಮೈಯೆಲ್ಲಾ ಜಡಗಟ್ಟಿದೆ
ವಾಹನ ಸಂಚಾರರು ಉಗುಳುವರು ನನ್ನ ಮೇಲೆ
ಮನುಷ್ಯನ ದುರ್ನಡತೆ
ಕಟ್ಟು ಹಾಕಿದೆ ನನ್ನ
ಹುಟ್ಟಿದ ದಿನದಿಂದ
ಕಷ್ಟದಲ್ಲಿ ಸಿಲುಕಿರುವೆ
ಚಿಗುರು ಎಲೆ ಬರಲು ಅಂಜುತ್ತಿದೆ ಹೆದರುತ್ತೀವೆ
ವಾಯುಮಾಲಿನ್ಯದಿಂದ…
ಕವಿತೆ-ಸರಿತ.ಹೆಚ್, ಕಾಡುಮಲ್ಲಿಗೆ…