ಚಂದ್ರವಳ್ಳಿ ನ್ಯೂಸ್, ಸೊರಬ : ಪಟ್ಟಣದ ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ. ಉಮೇಶ ಎಂಬ ಸರ್ಕಾರಿ ನೌಕರರ ಸೆ. ೪ರಿಂದ ಕಾಣೆಯಾಗಿದ್ದಾರೆ.
ಈ ಬಗ್ಗೆ ಎಂ. ಉಮೇಶ ಪತ್ನಿ ಆಶಾ ಸೆ. ೬ರಂದು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೊರಬ ಪಟ್ಟಣದ ಮರೂರು ರಸ್ತೆಯ ನಿವಾಸಿಯಾದ ಎಂ. ಉಮೇಶ ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಗಂಜೇನಹಳ್ಳಿ ಗ್ರಾಮದವರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರಿದ್ದಾರೆ.
ಸೆ. ೪ರಂದು ಎಂದಿನಂತೆ ಬೆಳಗ್ಗೆ ೧೦-೦೦ ಗಂಟೆಗೆ ಕರ್ತವ್ಯಕ್ಕೆ ತೆರಳುತ್ತೇನೆಂದು ಹೇಳಿ ಹೋದವರು ೧೧-೦೦ ಗಂಟೆಯಾದವರೂ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಿಬ್ಬಂದಿಗಳು ಉಮೇಶ್ ಪತ್ನಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಮೊಬೈಲ್ ನಂ. ಇನ್ ವ್ಯಾಲಿಡ್ ಅಂಥ ಬಂದ ಕಾರಣ ಪತ್ನಿ ಆಶಾ ದೂರು ನೀಡಿದ್ದು, ಸೊರಬ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ರೀತ್ಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.