ಶುದ್ಧ ನೀರಿಗಾಗಿ ತೆಪ್ಪದಲ್ಲಿ ಕೂತು ಉಪವಾಸ ಸತ್ಯಾಗ್ರಹ ನಡೆಸಿದ ಗ್ರಾಮಸ್ಥರು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಹೋರಾಟಕ್ಕಿರುವ ಶಕ್ತಿಯನ್ನ ಪ್ರಪಂಚಕ್ಕೆ ತೋರಿಸಿಕೊಟ್ಟವರು ಮಹಾತ್ಮ ಗಾಂಧಿ
, ಇಂದು ಗಾಂಧಿಯವರ ಹುಟ್ಟಿದ ದಿನ, ವಿಶ್ವದಾದ್ಯಂತ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ, ಶುದ್ಧ ನೀರಿಗಾಗಿ ಗಾಂಧಿ ಹೋರಾಟ ದಾರಿಯನ್ನ ತುಳಿದಿರುವ ಗ್ರಾಮಸ್ಥರು ಇಂದು ಸಹ ಉಪವಾಸ ಸತ್ಯಾಗ್ರಹ ನಡೆಸಿದರು, ಕೆರೆಯಲ್ಲಿ ತೆಪ್ಪದ ಮೇಲೆ ಕೂತ ಹೋರಾಟಗಾರರು ಮಳೆನೀರು ಕ್ಲೊಯು, ಶುದ್ಧ ನೀರು ಕೊಡುವಂತೆ ಆಗ್ರಹಿಸಿದರು. 

 ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳು ವಿಷವಾಗಿವೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಮತ್ತು ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಕೆರೆಯ ಒಡಲು ಸೇರಿ ಕುಲುಷಿತಗೊಂಡಿದೆ, ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ನೀರು ವಿಷವಾಗಿದೆ,

ಶುದ್ಧ ನೀರಿಗಾಗಿ ಆಗ್ರಹಿಸಿ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ, ಗ್ರಾಮಸ್ಥರ ಬೇಡಿಕೆಗಳು ಈಡೆರದ ಹಿನ್ನಲೆ ಗಾಂಧಿ ಜಯಂತಿ ದಿನವಾದ ಇಂದು ಗಾಂಧಿ ಹಾದಿಯಲ್ಲಿ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದರು. 

 ದೊಡ್ಡತುಮಕೂರು ಕೆರೆಯ ಬಳಿ ಸೇರಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನ ನಡೆಸಿದರು, ಕೆರೆಯಲ್ಲಿ ತೆಪ್ಪಗಳ ಮೇಲೆ ಕುಳಿತ ಹೋರಾಟಗಾರರು ಉಳಿಸಿ ಉಳಿಸಿ ಕೆರೆಗಳನ್ನ ಉಳಿಸಿ.. ಶುದ್ಧ ನೀರು ನಮ್ಮ ಹಕ್ಕು.. ಕೆರೆ ಇರುವುದು ಮಳೆ ನೀರು ಶೇಖರಣೆಗಾಗಿ ಎಂದು ಘೋಷಣೆಗಳನ್ನ ಕೂಗುವ ಮೂಲಕ ಸತ್ಯಾಗ್ರಹವನ್ನ ನಡೆಸಿದರು. 

 ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಹೋರಾಟಗಾರರಾದ ವಸಂತ್, ಶುದ್ಧ ನೀರಿಗಾಗಿ ಆಗ್ರಹಿಸಿ ನಾವು ಕಳೆದ ಮೂರು ವರ್ಷಗಳಿಂದ ಗಾಂಧಿ ತತ್ವದ ಮೇಲೆ ಸಂವಿಧಾನ ಬದ್ಧವಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಆದರೆ, ಅಧಿಕಾರಿಗಳು ನೀಡಿದ ಅಶ್ವಾಸನೆಗಳು ಕಾಗದಲ್ಲಿಯೇ ಉಳಿದಿದೆ, ಅರ್ಕಾವತಿ ನದಿ ಕಲುಷಿತವಾಗುವುದರಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಜನರಿಗೆ ತೊಂದರೆಯಾಗುತ್ತಿದೆ, ಇದರ ಗಂಭೀರತೆ ಅಧಿಕಾರಿಗಳಿಗಿಲ್ಲ ಎಂದರು. 

 ಎರಡನೇ ಹಂತದ ಶುದ್ಧೀಕರಣ ಘಟಕ ಸ್ಫಾಪಿಸುವುದ್ದಾಗಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೂ STP ಘಟಕ ಕಾರ್ಯರೂಪಕ್ಕೆ ಬಂದಿಲ್ಲ, ಎರಡು ಗ್ರಾಮ ಪಂಚಾಯಿತಿಗಳ ಪ್ರತಿ ಮನೆಗೂ ಮಳೆನೀರು ಕ್ಲೊಯು ಪದ್ಧತಿ ಅಳವಡಿಸುವುದ್ದಾಗಿ ಹೇಳಿದರು, ಅನುದಾನವಿಲ್ಲ ಎಂದು ಮಳೆನೀರು ಕ್ಲೊಯು ಕೈ ಬಿಟ್ಟಿದ್ದಾರೆ, ನಮ್ಮ ಬೇಡಿಕೆ ಈಡೆರುವರೆಗೂ ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು. 

 ಹೋರಾಟಗಾರರಾದ ಗಿರೀಶ್ ಮಾತನಾಡಿ, ಶುದ್ಧೀಕರಣ ಘಟಕ ಸ್ಫಾಪಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಕೆಲಸಗಳು ನಡೆದಿಲ್ಲ, ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಸ್ಫಾಪನೆಯಾಗಿ 40 ವರ್ಷಗಳಾದರು ಮಾಲಿನ್ಯ ನಿಯಂತ್ರಣ ಕಛೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರವಾಗಿಲ್ಲ, ಇಲ್ಲಿನ ಕೈಗಾರಿಕೆಗಳ ಬಗ್ಗೆ ದೂರು ನೀಡಿದ್ದಾರೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು. 

  ಅರ್ಕಾವತಿ ನದಿ ಹೋರಾಟ ಸಮಿತಿಯ ಮುಖಂಡರಾದ ಸತೀಶ್ ಮಾತನಾಡಿ, ಕಳೆದ 10 ವರ್ಷಗಳಿಂದ ಶುದ್ಧ ನೀರಿಗಾಗಿ ಹೋರಾಟ ಮಾಡುತ್ತಿದ್ದರು ಅಧಿಕಾರಿಗಳಿಂದ ಸೂಕ್ತ ಪ್ರತಿಫಲ ನಮಗೆ ಸಿಕ್ಕಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ನಮ್ಮ ಕೆರೆಗಳು ಕಲುಷಿತವಾಗಿವೆ.

 ವಿಷಕಾರಿ ನೀರು ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುವಂತಾಗಿದೆ, ನಮ್ಮ ಬೇಡಿಕೆಗಳು ಈಡೆರದಿದ್ದಲ್ಲಿ ನಮ್ಮ ಹೋರಾಟದ ಕಾವು ಹೆಚ್ಚಾಗುವುದು ಎಂದರು.

ಉಪವಾಸ ಸತ್ಯಾಗ್ರಹದಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

 

 

- Advertisement -  - Advertisement - 
Share This Article
error: Content is protected !!
";