ಲಕ್ಕೆನಹಳ್ಳಿ ಡ್ಯಾಮ್ ನಿರ್ಮಾಣ, ಅಧಿಕಾರಿಗಳನ್ನ ವಾಪಾಸ್ ಕಲಿಸಿದ ಗ್ರಾಮಸ್ಥರು

News Desk

ಲಕ್ಕೆನಹಳ್ಳಿ ಡ್ಯಾಮ್ ನಿರ್ಮಾಣ, ಅಧಿಕಾರಿಗಳನ್ನ ವಾಪಾಸ್ ಕಲಿಸಿದ ಗ್ರಾಮಸ್ಥರು.                                           ಚಂದ್ರವಳ್ಳಿ news ದೊಡ್ಡಬಳ್ಳಾಪುರ:              .       ತಾಲೂಕಿನ ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣ ಮಾಡಲು ಜಮೀನು ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ಸ್ಥಳೀಯ ಗ್ರಾಮಸ್ಥರು ತರಾಟೆ ತೆಗೆದುಕೊಂಡು ಹಿಂದಕ್ಕೆ ಕಳುಹಿಸಿರುವ ಘಟನೆ ನಡೆದಿದೆ.

ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಣೆ ಮಾಡಲು ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಐದು ಗ್ರಾಮಗಳು ಮುಳುಗಡೆಯಾಗಲಿವೆ ಎಂದು ರೈತರು ಆತಂಕದಿಂದ ನಾವು ಎಲ್ಲಿ ಹೋಗಬೇಕು ಮುಂದಿ ಹೊಸ ಜಾಗಕ್ಕೆ ಹೋದರೆ ನಾವು ಹುಟ್ಟಿ ಬೆಳೆದ ಸ್ಥಳ ನಮ್ಮ ತಂದೆ ತಾಯಿ ಬಂಧು ಬಳಗ ಸಮಾಧಿ ದೇವಾಲಯಗಳು ಫಲವತ್ತಾಗಿ ಬೆಳೆದ ಅಡಿಕೆ ತೆಂಗು ಬಾಳೆ ಸಪೋಟ ಮಾವು ಇನ್ನು ಇತರೆ ಬೆಳೆಗಳಿಂದ  ಸ್ವಾವಲಂಬಿಯಾಗಿ ನಮ್ಮ ಜೀವನ ನಡೆಯುತ್ತಿದೆ ಅದರಿಂದ ಜಲಾಶಯ ನಿರ್ಮಾಣದಿಂದ ಈ ಗ್ರಾಮಗಳ ರೈತರು ಈಗಾಗಲೇ ಹೋರಾಟ ಪ್ರಾರಂಭಿಸಿದ್ದಾರೆ.
ಯಾವುದೇ ಕಾರಣಕ್ಕೂ ಇಲ್ಲಿ ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳೀಯ ರೈತರಿಗೆ ಮಾಹಿತಿ ನೀಡದೆ ಸರ್ವೇ ಕೆಲಸ ನಡೆಸುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ನರಸಾಪುರ, ವಡೇರಹಳ್ಳಿ, ಬೆಣಚಿಹಟ್ಟಿ ಗ್ರಾಮಗಳ ರೈತರು ತಡೆದು ಹಿಂದಕ್ಕೆ ಕಳುಹಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ನರಸಾಪುರ ಗ್ರಾಮದ ರೈತ ಕೆಂಪರಾಜ್, ನಮ್ಮ ಸ್ವಂತ ಜಮೀನುಗಳಿಗೆ ಯಾವುದೇ ಸೂಚನೆ ನೀಡದೆ ಹಾಗು ಕಾಮಗಾರಿ ಮಾಡುವ ಮುನ್ನ ಅಧಿಕೃತ ನೋಟಿಸ್ ನೀಡದೆ ಯಾರೇ ಅತಿಕ್ರಮ ಮಾಡಲು ಬಿಡುವುದಿಲ್ಲ  ಹಾಗು
ಕಾನೂನಿನ ಕ್ರಮ ಜರಗಿಸುವ ಮೂಲಕ ದೂರು ದಾಖಲಿಸಲಾಗುವುದು ಎಂದು ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ರೈತರು ಎಚ್ಚರಿಕೆ ನೀಡಿದರು.

- Advertisement - 
Share This Article
error: Content is protected !!
";