ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಳ್ಳಿಗಳಿಗೆ ರಸ್ತೆ ಬೇಕಾ? ಹಾಗಿದ್ರೆ, ಗ್ಯಾರಂಟಿ ಬೇಡ ಎಂದು ಬರೆದುಕೊಡಿ. ಬುರುಡೆ ಭಾಷಣ ಹೊಡೆಯುವ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೇ, “ಗ್ಯಾರಂಟಿ ಗ್ಯಾರಂಟಿ” ಎಂದು ರಾಜ್ಯದ ಅಭಿವೃದ್ಧಿಯನ್ನು ಹಳ್ಳ ಹಿಡಿಸಿರುವ ನಿಮ್ಮ ಸರ್ಕಾರದ ದಿವಾಳಿತನ ಮತ್ತೆ ಬಟ ಬಯಲಾಗಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಇದಕ್ಕೆ ಸಾಕ್ಷಿ ಸಿಎಂ ಆರ್ಥಿಕ ಸಲಹೆಗಾರರೂ ಆಗಿರುವ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರ ಈ ಹೇಳಿಕೆ.
ಹಳ್ಳಿಗಳಿಗೆ ರಸ್ತೆ ಬೇಕಾದ್ರೆ, “ಗ್ಯಾರಂಟಿ ಬೇಡ” ಎಂದು ಬರೆದುಕೊಡುವಂತೆ ಜನರ ಬಳಿ ಅವಲತ್ತುಕೊಂಡಿರುವುದು ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಮತ್ತು ಸರ್ಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ಎಂಬ ಸತ್ಯವನ್ನು ಮತ್ತೊಮ್ಮೆ ಕರ್ನಾಟಕ ಕಾಂಗ್ರೆಸ್ ಶಾಸಕರೇ ಬಹಿರಂಗ ಪಡಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.