ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನೊಬ್ಬನಲ್ಲ ನ್ಯಾಯಕ್ಕಾಗಿ ಕೂಗಿದ ನಿಮ್ಮೆಲ್ಲರ ಸಹಸ್ರ ಸಹಸ್ರ ಕಂಠಗಳ ರಾವ, ನ್ಯಾಯಕ್ಕಾಗಿ ನೀವೆಲ್ಲ ಎತ್ತಿದ ಸಹಸ್ರಾರು ಕೈಗಳು, ನಿಮ್ಮ ಧ್ವನಿಯೂ ಪಾಂಚಜನ್ಯವಾಯಿತು ಎಂದು ಬಿಜೆಪಿ ನಾಯಕ, ಎಂಎಲ್ ಸಿ ಸಿ.ಟಿ ರವಿ ತಿಳಿಸಿದ್ದಾರೆ.
ನಿಮ್ಮ ಕೈ ಕಲ್ಪ ವೃಕ್ಷವಾಯಿತು, ನ್ಯಾಯ ಸಂಹಿತೆಯಿಂದ ಅಸತ್ಯ ಬಟ್ಟೆಕೆಟ್ಟು ಬೂದಿಯಾಯಿತು, ಅಸತ್ಯದ ಗ್ರಹಣಕ್ಕೆ ಪ್ರಖಂಡ ಸೂರ್ಯನನ್ನು ಬಹುಕಾಲ ಮರೆಮಾಚಲು ಸಾಧ್ಯವಾಗಲಿಲ್ಲ ಎಂದು ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.
ಸಂಕಟ, ಧರ್ಮಗ್ಲಾನಿ, ಚಿತ್ತಕ್ಷೋಭೆ ಉಲ್ಬಣಿಸಿದಾಗ ಸತ್ಯದ ಅವಿರ್ಭಾವವಾಯಿತು. ಸತ್ಯಮೇವ ಜಯತೇ ಎಂಬ ಮಾಂಡೂಕ್ಯ ಉಪನಿಷತ್ತಿನ ನುಡಿ ಮತ್ತೆ ನಿಜವಾಯಿತು ಎಂದು ರವಿ ಅವರು ತಿಳಿಸಿದ್ದಾರೆ.