ಪೋಲಾಗಿ ಹರಿಯುತ್ತಿರುವ ವಿವಿ ಸಾಗರದ ನೀರು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿ ವಿಲಾಸ ಸಾಗರಕ್ಕೆ ಮಳೆಯಿಂದಾಗಿ ನಿರೀಕ್ಷೆಗೂ ಮೀರಿದ ನೀರಿನ ಒಳ ಹರಿವು ಬರುತ್ತಿದೆ.

ಅಕ್ಟೋಬರ್-26ರಂದು ಭಾನುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 1230 ಕ್ಯೂಸೆಕ್ ಗೆ ನೀರಿನ ಒಳ ಹರಿವು ಇದೆ. 133.30 ಅಡಿಗೆ ಏರಿಕೆಯಾಗಿದೆ. ಅಲ್ಲದೆ ಕೋಡಿ ಮೂಲಕ 9814 ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ.

- Advertisement - 

ನೀರಿನ ಒಳ ಹರಿವಿಗಿಂತ ಹೆಚ್ಚಿನ ನೀರನ್ನು ಗೇಟ್ ಒಪನ್ ಮಾಡಿ ಹಳ್ಳಕ್ಕೆ ಹರಿಸುತ್ತಿರುವುದರಿಂದ ವಿವಿ ಸಾಗರದ ನೀರು ಪೋಲಾಗಿ ಹರಿಯುತ್ತಿದೆ. ಅಲ್ಲದೆ  ಕಾಲುವೆಗಳ ಮೂಲಕ ನೀರು ಹರಿಸಿದರೆ ರೈತರು ಅಚ್ಚುಕಟ್ಟು ಪ್ರದೇಶಗಳಿಗೆ ಹರಿಸಿಕೊಳ್ಳಲಿದ್ದಾರೆ.

ರೈತರಿಗೂ ನೀರು ಬೇಡವಾದರೆ ಆ ಎಲ್ಲ ನೀರು ವೇದಾವತಿ ನದಿ ಸೇರಲಿದೆ. ಹಾಗಾಗಿ ಪೋಲಾಗಿ ಹರಿಯುವ ನೀರನ್ನ ಎಡ ಮತ್ತು ಬಲ ಕಾಲುವೆಗಳಿಗೆ ಹರಿಸಬೇಕಾಗಿದೆ.

- Advertisement - 

ಇನ್ನೂ ಹೆಚ್ಚಿನ ನೀರು ಹರಿಸಬೇಕೆಂದರೆ ಕುಂದಲಗುರು ತೊಟ್ಟಿ ಮೂಲಕ ವಿವಿಧ ಬ್ಯಾರೇಜ್, ಚೆಕ್ ಡ್ಯಾಂ, ಕೆರೆ ಕಟ್ಟೆಗಳಿಗೆ ನೀರು ಭರ್ತಿ ಮಾಡಲಿ ಎಂದು ರೈತ ಮುಖಂಡ ಪಿಟ್ಲಾಲಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.

 

Share This Article
error: Content is protected !!
";