ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆಯ ಗ್ಯಾರೆಂಟಿ ಇಲ್ಲವಾಗಿದೆ. ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ಮೇಲೆ 1,369 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಜ್ವಲಂತ ನಿದರ್ಶನವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಭಯೋತ್ಪಾದಕರು, ಅತ್ಯಾಚಾರಿಗಳು, ಮತಾಂಧ ಜಿಹಾದಿಗಳನ್ನು ಬ್ರದರ್ಸ್ ಎನ್ನುವ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟ ತಪ್ಪಿಗೆ ಇಂದು ಹಿಂದೂ ಯುವತಿಯರು ಕೇರಳ ಫೈಲ್ಸ್ ಮಾದರಿಯಲ್ಲಿ ಬಲಿಯಾಗುತ್ತಿದ್ದಾರೆ.
ಪದೇ ಪದೇ ನಡೆಯುತ್ತಿರುವ ಅಮಾನವೀಯ ಘಟನೆಗಳು ಕನ್ನಡಿಗರನ್ನು ತಲೆ ತಗ್ಗಿಸುವಂತೆ ಮಾಡಿದೆ. ಕೂಡಲೇ ಸಿದ್ದರಾಮಯ್ಯ ಅವರು ಹಾಗೂ ಡಾ.ಪರಮೇಶ್ವರ ಅವರು ಅತ್ಯಾಚಾರಿಗಳನ್ನು ಹತ್ತಿಕ್ಕದೆ ಹೋದರೆ, ಮಹಿಳೆಯರು, ಹೆಣ್ಣುಮಕ್ಕಳ ಶಾಪ ಈ ಸರ್ಕಾರಕ್ಕೆ ತಟ್ಟುವುದು ಶತಸಿದ್ಧ ಎಂದು ಎಚ್ಚರಿಸಿದ್ದಾರೆ.