ಶ್ರೀ ಬಗಳಮುಖಿ ದೇವಿಯ ಆರಾಧನೆ ಕಾರ್ಯಕ್ರಮ ಸಂಪನ್ನ 

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
11ನೇ ವರ್ಷದ ಶ್ರೀ ಬಗಳಮುಖಿ ದೇವಿಯ ಆರಾಧನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

 ನವರಾತ್ರಿ ಪ್ರಯುಕ್ತ ಬಗಳಮುಖಿ ದೇವಿಯ ಆರಾಧನೆ ಅಂಗವಾಗಿ  ಪ್ರತಿ ವರ್ಷದಂತೆ ಈ ವರ್ಷವೂ  ಸುಮಂಗಲಿಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ, ನವ ದುರ್ಗೆಯರ ವಿಶೇಷ ಹೋಮ, ನಂತರ ದುರ್ಗ ಹೋಮವನ್ನು  ದೇವಾಲಯದ ಪ್ರಧಾನ ಅರ್ಚಕರಾದ  ಸುಬ್ರಮಣಿ ಅವರ ನೇತೃತ್ವದಲ್ಲಿ  ನೆರವೇರಿಸಲಾಯಿತು.

- Advertisement - 

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಟರಾದ ನೆ.ಲ. ನರೇಂದ್ರ ಬಾಬು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ದೇವಿಯ ಜಾತ್ರೆಯನ್ನು  ಬಹಳ ಅದ್ದೂರಿಯಾಗಿ  ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನವರಾತ್ರಿ ಸಂದರ್ಭದಲ್ಲಿ  ನವ ದುರ್ಗೆಯರನ್ನು  ಸ್ಮರಿಸುತ್ತಾ ಸುಮಂಗಲಿರಿಗೆ  ಬಾಗಿನ ಅರ್ಪಿಸುವುದು ಇಲ್ಲಿನ  ವಿಶೇಷತೆಯಾಗಿದೆ . ಇಂದಿನ ಕಾರ್ಯಕ್ರಮದಲ್ಲಿ  ಕೇವಲ ತಾಲೂಕು ಅಷ್ಟೇ ಅಲ್ಲದೆ  ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ  ದೇವಿಯ ದರ್ಶನ ಪಡೆಯುತ್ತಿರುವುದು ಜನರ ಭಕ್ತಿ ಹಾಗೂ ತಾಯಿಯ ಶಕ್ತಿಯನ್ನು ತೋರಿಸುತ್ತದೆ ಎಂದರು . 

 ಅಗ್ನಿವಂಶ ತಿಗಳ ಕ್ಷತ್ರಿಯ  ಸಮುದಾಯದ ಮುಖಂಡರಾದ ದೇಶದ ಮನೆ ಯಜಮಾನ್ ಗಂಗಾ ಹನುಮಯ್ಯ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ  ದೇವಿಯ ಆರಾಧನೆಯನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ  ಕಾರ್ಯಕ್ರಮದ ಜವಾಬ್ದಾರಿಯನ್ನು  ಪ್ರಧಾನ ಅರ್ಚಕರಾದ ಸುಬ್ರಮಣಿ ಹೊತ್ತು  ಸುಸೂತ್ರವಾಗಿ ನಡೆಸುತ್ತಿದ್ದಾರೆ . ಇಂತಹ ಆಚರಣೆಗಳು  ಮುಂದೆ ಮತ್ತಷ್ಟು ಹೆಚ್ಚಾಗಲಿ  ದೇವಿ ಬಗಳಮುಖಿಯ ಕೀರ್ತಿ  ಎಲ್ಲೆಡೆ ಪಸರಿಸಲಿ ಎಂದರು. 

- Advertisement - 

ಅಗ್ನಿವಂಶ ತಿಗಳ ಕ್ಷತ್ರಿಯ  ಸಮುದಾಯದ ಹದಿನೆಂಟು ಗಡಿ ಯಜಮಾನ ಜಗದೀಶ್ ಮಾತನಾಡಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿ ಬಂದಿದ್ದು 11ನೇ ವರ್ಷದ  ಶ್ರೀ ಬಗಳಾ ಮುಖಿ ಆರಾಧನೆ  ಅತ್ಯಂತ ಸಂತೋಷ ಹಾಗೂ ಸಡಗರದಿಂದ ಸಾಗುತ್ತಿದೆ. ಈ ಸಂಭ್ರಮಾಚರಣೆ  ಕೇವಲ ಗ್ರಾಮಕ್ಕೆ ಸೀಮಿತವಾಗದೆ  ರಾಜ್ಯಮಟ್ಟದಲ್ಲಿ  ಸಂಭ್ರಮಿಸುವಂತಾಗಲಿ ಎಂದರು. 

 ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣಿ ಮಾತನಾಡಿ  ಪ್ರತಿ ವರ್ಷವೂ  ನವರಾತ್ರಿ ಸಂದರ್ಭದಲ್ಲಿ  ದೇವಿಯ ಆರಾಧನೆ ಮಾಡಲಾಗುವುದು ಈ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುವುದರ ಜೊತೆಗೆ  ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ  ಅನ್ನಸಂತರ್ಪಣೆ ಮಾಡಲಾಗುವುದು . ಪ್ರತಿ ವರ್ಷವೂ  ಭಕ್ತಾದಿಗಳ ಸಂಖ್ಯೆ ಹೆಚ್ಚುತಲೆ ಇದೆ  ಈ ಬಾರಿಯೂ  ಹೊರ ಜಿಲ್ಲೆಗಳಿಂದಲೂ  ಭಕ್ತಾದಿಗಳು ಬಂದು ತಾಯಿಯ ದರ್ಶನ ಪಡೆಯುತ್ತಿದ್ದಾರೆ  ಈ ಬೆಳವಣಿಗೆ ನಮಗೆ ಸಂತಸ ತಂದಿದೆ ಎಂದರು.

ಸ್ಥಳೀಯ ಮಾಜಿ ಅಧ್ಯಕ್ಷರು ಹಾಗೂ ಯೂಥ್ ಕಾಂಗ್ರೆಸ್ ಮುಖಂಡರಾದ ವಿಜಿ ಕುಮಾರ್, ಸ್ಥಳೀಯ ಮಾಜಿ ಸದಸ್ಯರಾದ ಸುಬ್ಬಣ್ಣ, ವಕೀಲರದ ದೇವನಹಳ್ಳಿ ಮಂಜುನಾಥ್ , ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಸಿ ಮಂಜಣ್ಣ , ಅಗ್ನಿವಂಶ ಕ್ಷತ್ರಿಯ (ತಿಗಳರ ) ಗಜಕೇಸರಿ ಸೇನೆಯ ರಾಜ್ಯ ಕಾರ್ಯದರ್ಶಿ  ಕೆ ಆರ್ ಮಧುಸೂಧನ್, ನೆಲಮಂಗಲ ಯಜಮಾನ್ ಉಮೇಶ್ ಸೇರಿದಂತೆ  ಸ್ಥಳೀಯ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

 

 

Share This Article
error: Content is protected !!
";