ಮಾದಿಗ ಸಮುದಾಯಕ್ಕೆ ಬಹುದೊಡ್ಡ ಪರಂಪರೆ ಇದ್ದು ಯುವಕರು ಅರಿಯಬೇಕು-ಮಾದಾರಶ್ರೀ

News Desk

ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ಎಡ ಅಥವಾ ಬಲ ಪಂಥಕ್ಕೆ ಕಟ್ಟು ಬೀಳದೆ ಮಧ್ಯಮ ಮಾರ್ಗ ಅನುಸಿರಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಪ್ರತಿಪಾದಿಸಿದರು. 

ಬಾಗಲಕೋಟೆಯ ನವನಗರದಲ್ಲಿ ಶ್ರೀಮಾದಾರ ಚನ್ನಯ್ಯ ಸೇವಾ ಸಮಿತಿ ಆಯೋಜಿಸಿದ್ದ ಪ್ರೊ.ಹೆಚ್.ಲಿಂಗಪ್ಪ ರಚಿಸಿರುವ ದಲಿತ ವಚನಕಾರರ ಕುರಿತ ಗ್ರಂಥಗಳ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಮಹಾತ್ಮ ಗೌತಮ ಬುದ್ದರು ಮುಕ್ತ ಮನಸ್ಸಿನಿಂದ ಜಗದ ವಿಷಯಗಳನ್ನು ಸ್ಪೀಕರಿಸುವ ಮನೋಭಾವ ಸಿದ್ದಿಸಿಕೊಂಡರು. ಎಡ ಬಲ ಎನ್ನದೆ ಮಧ್ಯಮ ಮಾರ್ಗ ಅನುಸರಿಸಿದ ಫಲವಾಗಿ ಚಿರ ಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಶ್ರೀಗಳು ನುಡಿದರು.

- Advertisement - 

ಮಾದಿಗ ಸಮುದಾಯಕ್ಕೆ ಬಹುದೊಡ್ಡ ಪರಂಪರೆ ಇದೆ. ಈ ಬಗ್ಗೆ ಸಮುದಾಯದ ಯುವ ಸಮುದಾಯ ತಿಳಿದಿಕೊಳ್ಳಬೇಕು. ತಳ ವರ್ಗದ ಶರಣೆ, ಶರಣರ ಹಾಗೂ ಸಾಧಕರ ಕುರಿತು ಸುಮಾರು ಐವತ್ತು ಗ್ರಂಥಗಳನ್ನು ಹೆಚ್. ಲಿಂಗಪ್ಪ ಬರೆದಿರುವುದು ಸಾಧನೆಯೇ ಸರಿ. ಯುವ ಪೀಳಿಗೆಗೆ ಈ ಗ್ರಂಥಗಳು ಮಾರ್ಗದರ್ಶಿಯಾಗಿವೆ ಎಂದರು.
ನಿವೃತ್ತರಾದರು ಹೇಗೆ ಬದುಕು ನಡೆಸಬೇಕೆಂಬುದಕ್ಕೆ ಪ್ರೊ. ಲಿಂಗಪ್ಪ ಮಾದರಿಯಾಗಿದ್ದಾರೆ. ಯುವ ಸಮುದಾಯ ಸಮಾಜದ ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ನಡೆದ ವಚನ ಚಳುವಳಿ ಜಗತ್ತಿಗೆ ಮಾದರಿಯಾಗಿದೆ. ಕಲ್ಯಾಣ ಕ್ರಾಂತಿಯ ನಂತರ ವಚನಕಾರರು ತಾವು ಬರೆದ ವಚನ ಗ್ರಂಥಗಳನ್ನು ರಕ್ಷಿಸಲು ನಾಡಿನ ಹಲವು ಕಡೆ ತೆರಳಿದರು. ಹೀಗಾಗಿ ಇಂದು ಅವರು ರಚಿಸಿದ ವಚನಗಳು ನಮಗೆ ಲಭ್ಯವಾಗಿವೆ. ವಚನಗಳು ಸಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿವೆ ಎಂದು ಬಸವಮೂರ್ತಿ ಮಾದಾರ ಸ್ವಾಮೀಜಿ ಹೇಳಿದರು.

- Advertisement - 

ಮಾಜಿ ಸಚಿವ ಎಸ್ ಆರ್ ಪಾಟೀಲ್ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಮಾಜದಲ್ಲಿ ಜಾತೀಯತೆ ಜೀವಂತವಾಗಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು. 12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳುವಳಿಯ ಮೂಲಕ ಜಾತೀಯತೆ ಮೂಢನಂಬಿಕೆ ಕಂದಾಚಾರಗಳನ್ನು ತೊಡೆದು ಹಾಕಲು ಶ್ರಮಿಸಿದರು. ವಚನಕಾರರ ಚಳುವಳಿ ಎಂದರೆ ಅದೊಂದು ದಲಿತ ಚಳುವಳಿ ಎಂದರು.

ಹೆಚ್ ಲಿಂಗಪ್ಪ ನವರು ದಲಿತ ಶರಣ ಶರಣೆಯರ, ವಚನಕಾರರ ಕುರಿತು ಎಂಟು ಗ್ರಂಥಗಳನ್ನು ರಚಿಸಿ  ಲೋಕಾರ್ಪಣೆ ಮಾಡಿರುವುದು ಅತ್ಯುತ್ತಮ ಕಾರ್ಯ ಎಂದು ಹೇಳಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣರ ಕುರಿತು ಪ್ರಕಟಗೊಂಡಿರುವ ಕೃತಿಗಳನ್ನು ಪ್ರತಿಯೊಬ್ವರು ಓದಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಬರೆದರೆ ಸಾಲದು ಸಮಾಜಕ್ಕೆ ತೊಂದರೆ ನೀಡದ ರೀತಿಯಲ್ಲಿ ಬದುಕುವುದನ್ನು ಅರಿಯಬೇಕು ಎಂದರು.

ಆಗಿ ಹೋಗಿರುವ ಕಹಿ ಘಟನೆಗಳನ್ನು ಮರೆತು ಉತ್ತಮ ಜೀವನದ ಕಡೆ ಗಮನ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಮೀರಾಸಾಬೀಹಳ್ಳಿ ಶಿವಣ್ಣ
, ಡಾ.ಮಹಾಂತೇಶ್, ಮುತ್ತಣ್ಣ ಬೆಣ್ಣೂರ ಮತ್ತಿತರರು ಇದ್ದರು. ಇದೇ ವೇಳೆ ಸಾಹಿತಿ ಪ್ರೊ. ಹೆಚ್. ಲಿಂಗಪ್ಪ ಅವರಿಗೆ ಚಾಲುಕ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

Share This Article
error: Content is protected !!
";