ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಸಬಾ ಹೋಬಳಿ ಜಿಂಕೆ ಬಚ್ಚಳ್ಳಿಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿರುವ ಸಂಗತಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.
ಶುಕ್ರವಾರ ಹನುಮ ಜಯಂತಿಯ ಪ್ರಯುಕ್ತ ರಾತ್ರಿ ಒಂದು ಗಂಟೆಯ ವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಪೂಜಾಕಾರ್ಯದ ನಂತರ ಭಕ್ತಾದಿಗಳು ಮನೆಗೆ ತೆರಳಿದ ಮೇಲೆ ತಡ ರಾತ್ರಿ ಎರಡು ಗಂಟೆಯ ನಂತರ ಕಳ್ಳರು ಕೈ ಚಳಕ ತೋರಿದ್ದಾರೆನ್ನಲಾಗಿದೆ.
ಹುಂಡಿ ಒಡೆದಿರುವ ಕಳ್ಳರು ಹಣ ಮತ್ತು ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿ. ಸಿ. ಕ್ಯಾಮರಾದ ಡಿ. ವಿ. ಆರ್ ಗಳ ಸಮೇತ ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಒಂದೂವರೆ ವರ್ಷದ ಭಕ್ತರ ಹಣ ಹುಂಡಿಯಲ್ಲಿತ್ತು ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.