ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಗ್ರಾಮಾಂತರ ಮಧುರೆ ಹೋಬಳಿ ಬೈರಸಂದ್ರ ಗ್ರಾಮದಲ್ಲಿ ರೈತ ಶೆಡ್ ನಲ್ಲಿದ್ದ ಸುಮಾರು 30 ಹಂದಿ ಮರಿಗಳನ್ನು ಕಳ್ಳರು ಕದ್ದೊಯ್ದಿದಿರುವ ಘಟನೆ ನೆಡೆಸಿದೆ.
ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು, ಮಾಲೀಕರು ಎಂದಿನಂತೆ ಬೆಳಗ್ಗೆ ಹಂದಿ ಶೆಡ್ ಬಳಿ ಹೋದಾಗ ಹಂದಿ ಮರಿಗಳು ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಂದಿ ಮರಿಗಳನ್ನು ಕದ್ದೊಯುವ ಅತುರದಲ್ಲಿ ಕಳ್ಳನೊಬ್ಬ ತಾನು ಧರಿಸಿದ್ದ ಬಟ್ಟೆಯನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಬೈರಸಂದ್ರ ಗ್ರಾಮದ ದಿವಾಕರ್ ಎಂಬುವರಿಗೆ ಸೇರಿದ ಹಂದಿ ಶೆಡ್ ಇದಾಗಿದ್ದು, ಇವರು ಹಲವು ವರ್ಷಗಳಿಂದ ಹಂದಿ ಸಾಕಾಣಿಕೆ ಮಾಡುತ್ತಿದ್ದರು. ಶೆಡ್ ನಲ್ಲಿ ಸುಮಾರು 100ಕ್ಕೂ ಹೆಚ್ಚು ಹಂದಿಗಳಿದ್ದವು ಎನ್ನಲಾಗಿದೆ. ಇದರಲ್ಲಿ 30 ಹಂದಿ ಮರಿಗಳನ್ನು ಕದ್ದೊಯ್ದ್ರಿದ್ದಾರೆ.
ಕಳೆದ ರಾತ್ರಿ ಮಳೆ ಯಾಗುತ್ತಿದ್ದ ಕಾರಣ, ಮಾಲೀಕರು ಶೆಡ್ ಕಡೆಗೆ ಹೋಗಿರಲಿಲ್ಲ. ಇದೇ ಸಮಯ ಬಳಸಿಕೊಂಡ ಕಳ್ಳರು ಶೆಡ್ ಬಳಿ ವಾಹನದಲ್ಲಿ ಬಂದು ಹಂದಿ ಮರಿಗಳನ್ನು ಕಳವು ಮಾಡಿದ್ದಾರೆ. ಕಳ್ಳರ ನಡೆದಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಇದರ ಜೊತೆಯಲ್ಲಿ ಕಳ್ಳನೊಬ್ಬ ತನ್ನ ಜರ್ಕಿನ್ ಬಟ್ಟೆ ಮರೆತು ಹೋಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.