ಅಂದು ದೇಶ ವಿಭಜಿಸಿದರು, ಈಗ ದೇಶದ ಭೂಪಟ ವಿರೂಪಗೊಳಿಸಿದ್ದಾರೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದು ದೇಶವನ್ನು ವಿಭಜಿಸಿದರು, ಈಗ ಮತ್ತೊಮ್ಮೆ ದೇಶದ ಭೂಪಟವನ್ನು ವಿರೂಪಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಏನು ಪ್ರಿಯವೋ ಅದು ಕಾಂಗ್ರೆಸ್ಸಿಗೂ ಪ್ರಿಯ ಅನ್ನುವುದನ್ನು ಮತ್ತೊಮ್ಮೆ ದೃಢ ಪಡಿಸಿದ ಪಾಕ್ ಪ್ರೇಮಿ ಕಾಂಗ್ರೆಸ್. ಈ ರೀತಿಯ ವಿರೂಪಗೊಳಿದ ಭೂಪಟವನ್ನು “ಭಾರತ ವಿರೋಧಿ ಶಕ್ತಿಗಳು ಮತ್ತು ಭಾರತದ ಶತ್ರುಗಳು” ಮಾತ್ರ ಉಪಯೋಗಿಸುತ್ತಾರೆ ಎಂದು ಸಿ ಟಿ ರವಿ ಹೇಳಿದರು.

- Advertisement - 

ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ ಕರ್ನಾಟಕ ಕಾಂಗ್ರೆಸ್..!!ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ. ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ,

ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹಾ ಹೀನ ಕೆಲಸಕ್ಕಾದರೂ “ಸಿದ್ದ” ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್‌ಗಳೇ ಸಾಕ್ಷಿ. ಸಿಎಂ ಸಿದ್ದರಾಮಯ್ಯ ಅವರೆ, ಕೂಡಲೇ ಈ ವಿವಾದಿತ ಬ್ಯಾನರ್ ಗಳನ್ನು ತೆರವುಗೊಳಿಸಿ, ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಆಗ್ರಹ ಮಾಡಿದೆ.

- Advertisement - 

 

Share This Article
error: Content is protected !!
";