ಇದೆ ಏ.18 ರಂದು ರಿಕ್ಷಾ ಚಾಲಕ ತೆರೆಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಯುಷ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಶರಾವತಿ ಶಶಿಕುಮಾರ್ ರವರು ನಿರ್ಮಿಸಿರುವ ಚಿತ್ರ ರಿಕ್ಷಾ ಚಾಲಕ
ಇದೆ ಏ.೧೮ ರಂದು ತೆರೆ ಕಾಣುತ್ತಿದೆ. ಆಯುಷ್ ಶಶಿಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವು ಕೊರೋನ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ಆದಾಗ ಆಟೋ ಡ್ರೈವರ್‌ಗಳು ಎದುರಿಸಿದ ಸಂಕಷ್ಟಗಳನ್ನ, ಅನುಭವಿಸಿದ ನೋವುಗಳನ್ನ ಕಣ್ಣಾರೆ ಕಂಡಿದ್ದು , ಅದೇ ಕಥೆಯನ್ನು ಈಗ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ.

ಒಳ್ಳೆ ಆಟೋ ಡ್ರೈವರ್ ಸಮಾಜದಲ್ಲಿ ಸಾಕಷ್ಟು ಕಷ್ಟ ಎದುರಿಸುತ್ತಾನೆ. ಆಟೋ ಡ್ರೈವರ್‌ಗಿರುವ ಕಷ್ಟವೇನು ಅಂತ ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಮನೆಮಂದಿಯೆಲ್ಲ ಕುಳಿತು ನೋಡಬಹುದಾದ ಚಿತ್ರ ಇದಾಗಿದ್ದು ಚಿತ್ರಮಂದಿರಕ್ಕೆ ಬಂದು ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕೆಂದು ನಿರ್ಮಾಪಕ ಶರಾವತಿ ಶಶಿಕುಮಾರ ಮತ್ತು ನಾಯಕ ನಟ ಚಿರಂತ ಮನವಿ ಮಾಡಿದ್ದಾರೆ. ಮೈಸೂರು, ವರುಣ, ಕೆ ಆರ್ ನಗರ ,ಸಾಲಿಗ್ರಾಮ ಹಾಗೂ ಮುರ್ಡೇಶ್ವರದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ನಾಯಕ ಚಿರಂತ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದಾರೆ. ನಾಯಕಿಯಾಗಿ ನಂದಿನಿ, ಬಾಲರಾಜ್ ವಾಡಿ, ಮಿಮಿಕ್ರಿ ಗೋಪಿ, ಹರಣಿ, ಚಂದ್ರಪ್ರಭ, ವಿನೋದ್ ಗೊಬ್ರಗಾಲ, ರಜಿನಿ, ದರ್ಶನ್, ಮುನಿಸ್ವಾಮಿ, ನವೀನ್ ಕುಮಾರ್, ಮುಂತಾದವರಿದ್ದಾರೆ.

ಧರ್ಮಾಚಾರಿ ಸಹ ನಿರ್ಮಾಪಕರಾಗಿದ್ದಾರೆ. ವೇದಾಂತ್ ಅತಿಶಯ್ ಜೈನ್ ಸಂಗೀತ, ವಂಶಿ ಸಂಕಲನ, ಶಶಿ ಆರಕ್ಷಕ ಅವರ ಕಥೆ, ಸಾಹಿತ್ಯ, ಸಂಭಾಷಣೆ , ನೃತ್ಯ, ಆನಂದ್ ಅವರ ಛಾಯಾಗ್ರಹಣ ವಿ. ರಾಮದೇವ್ ಅವರ ಸಾಹಸ , ಕಲ್ಲೇಶ್, ಡಾ. ಪ್ರಭು ಗಂಜಿಹಾಳ , ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕ ,ದೇವು ಅವರ ಪ್ರಚಾರಕಲೆ ಈ ಚಿತ್ರಕ್ಕಿದೆ.

Share This Article
error: Content is protected !!
";