ಗೆಲುವು ಎಂದರೆ ಇದೆ!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳ ಮೇಲೆ ಭಾರತದ ಸೈನಿಕರು 90 ನಿಮಿಷಗಳ ದಾಳಿ ಮಾಡಿದ ರೀತಿ ನಮ್ಮ ಪ್ರಾದೇಶಿಕ ಮಿಲಿಟರಿ ಡೈನಾಮಿಕ್ಸ್‌ನ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದೆ.

ಈ ನಿಖರವಾದ ದಾಳಿಯು ನಮ್ಮ ವಾಯುಪಡೆಯ ಶ್ರೇಷ್ಠತೆಯನ್ನು ಹೆಚ್ಚಿಸುವ ಜೊತೆಗೆ, ಪಾಕಿಸ್ತಾನದ ಪ್ರತಿಕ್ರಿಯೆಯ ಸಾಮರ್ಥ್ಯವನ್ನೆ ಬುಡಮೇಲು ಮಾಡಿದೆ‌. ಪ್ರತಿಯೊಂದು ವಾಯುನೆಲೆಯ ಮೇಲಾದ ಹಾನಿ ಹಾಗೂ ಅವುಗಳ ವಿನಾಶ ಪಾಕಿಸ್ತಾನಿ ಮಿಲಿಟರಿಯ ಕಾರ್ಯತಂತ್ರ ಮತ್ತದರ ಮಾನಸಿಕ ಶಕ್ತಿಯನ್ನು ತೀವ್ರವಾಗಿ ಕುಂದಿಸಿದೆ.

ಪಾಕಿಸ್ತಾನದ ಶಹಬಾಜ್‌ವಾಯುನೆಲೆ, ಜಾಕೋಬಬಾದ್‌, ನೂರ್‌ಖಾನ್‌ವಾಯುನೆಲೆ, ರಾವಲ್ಪಿಂಡಿ, ಪಾಕಿಸ್ತಾನ, ಸುಕ್ಕೂರ್ ವಾಯುನೆಲೆ, ಸಿಂಧ್,  ರಹೀಂ ಯಾರ್‌ಖಾನ್‌ವಿಮಾನ ನಿಲ್ದಾನ, ಪಿಎಎಫ್ ಮುಶಾಫ್‌ವಾಯುನೆಲೆ, ಸರ್ಗೋಧಾ, ಭೋಲಾರಿ ವಾಯುನೆಲೆ, ಸಿಂಧ್‌, ಲಾಹೋರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆ, ಪಿಎಎಫ್‌ವಾಯುನೆಲೆ, ರಫಿಕ್ವಿ ಪಾಕಿಸ್ತಾನ & ಚುನಿಯಾನ್‌ವಾಯು ರಕ್ಷಣಾ ರೇಡಾರ್‌, ಆರೀಫ್ವಾಲಾ ವಾಯು ರಕ್ಷಣಾ ರೇಡಾರ್‌, ಪ್ರಸೂರ್‌ವಾಯು ರಕ್ಷಣಾ ರೇಡಾರ್‌ ಗಳನ್ನು ಭಾರತೀಯ ಸೈನಿಕ ಪಡೆ ನಾಶ ಮಾಡಿದೆ.

Share This Article
error: Content is protected !!
";