ಕಾಂಗ್ರೆಸ್ ಸರ್ಕಾರದಲ್ಲಿ ಅನ್ನದಾತರ ಬದುಕಿಗೆ ಗ್ಯಾರಂಟಿ ಇಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅನ್ನದಾತರ ಬದುಕಿಗೆ ಗ್ಯಾರಂಟಿ ಇಲ್ಲವಾಗಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಇದಕ್ಕೆ ಸಾಕ್ಷಿ ರಾಜ್ಯದಲ್ಲಿ (2024ರ ಏಪ್ರಿಲ್ ನಿಂದ 2025 ಮೇ 25 ರವರೆಗೆ) ಒಂದು ವರ್ಷದಲ್ಲಿ ಬರೋಬ್ಬರಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು.   ಅತಿವೃಷ್ಟಿ-ಅನಾವೃಷ್ಠಿ, ಬೆಳೆ ನಾಶ, ಬೆಳೆದ ಬೆಳೆಗೆ ಬೆಲೆ ಸಿಗದೆ ನಷ್ಟ, ಸಾಲದ ಶೂಲಕ್ಕೆ ನಲುಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಒಟ್ಟು 3,400 ರೈತರು ಆತ್ಮಹತ್ಯೆಗಳು ಆಘಾತಕಾರಿ ಎಂದು ಜೆಡಿಎಸ್ ಬೇಸರ ವ್ಯಕ್ತಪಡಿಸಿದೆ.

- Advertisement - 

ನಕಲಿ ಬೀಜಗಳ ಹಾವಳಿ ಒಂದು ಕಡೆಯಾದರೇ, ರೈತರಿಗೆ ಅತ್ಯಗತ್ಯವಾದ ಯೂರಿಯಾ, ಡಿಮಿಸಿ ಸೇರಿದಂತೆ ಅಗತ್ಯ ರಸಗೊಬ್ಬರಗಳನ್ನು ಕೊಡಲಾಗದ ಹೀನ ಸ್ಥಿತಿಗೆ ಬಂದಿರುವುದು ಸರ್ಕಾರದ ನಿರ್ಲಕ್ಷ್ಯಧೋರಣೆಗೆ ಹಿಡಿದ ಕೈಗನ್ನಡಿ.

 ಗ್ಯಾರಂಟಿಗಳು ಅನ್ನದಾತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದನ್ನು ಕಾಂಗ್ರೆಸ್‌ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement - 

 

Share This Article
error: Content is protected !!
";