ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವಿಭಾಗದಲ್ಲಿ ಖಾಯಂ ವೈದ್ಯರಿಲ್ಲ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ “ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್” ವಿಭಾಗದಲ್ಲಿ ಪೂರ್ಣಕಾಲಿಕ ಖಾಯಂ ವೈದ್ಯರಿಲ್ಲದೇ
, ರೋಗಿಗಳು ವಾರಗಟ್ಟಲೇ ನೋವು ಅನುಭವಿಸುತ್ತಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೇಜಾವ್ದಾರಿಗೆ ನಿದರ್ಶನ ಎಂದು ಜೆಡಿಎಸ್ ಟೀಕಿಸಿದೆ.

2 ಬಾರಿ ಡಿಸಿಎಂ, 2 ಬಾರಿ ವಿರೋಧ ಪಕ್ಷದ ನಾಯಕರಾಗಿ, 2 ಸಲ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ನವರ ತವರು ಜಿಲ್ಲೆಯಲ್ಲೇ ಇಂತಹ ಅವ್ಯವಸ್ಥೆ ನಾಚಿಕೆಗೇಡು ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.  

- Advertisement - 

ಆಸ್ಪತ್ರೆಯಲ್ಲಿ ಒಂದು ವಾರದ ಮುಂಚೆ ನೋಂದಣಿ ಮಾಡಿಕೊಂಡ ನಿಗದಿತ ಸಂಖ್ಯೆಯ ರೋಗಿಗಳಿಗೆ ಪ್ರತಿ ಗುರುವಾರ ಬೆಳಿಗ್ಗೆ 9ರಿಂದ 10ರವರೆಗೆ ಮಾತ್ರ ಒಬ್ಬ ವೈದ್ಯರು ಸ್ಕ್ಯಾನಿಂಗ್ ಮಾಡುತ್ತಾರೆ. ರೋಗಿಗಳು ತಡವಾಗಿ ಬಂದರೆ, ವೈದ್ಯರು ರಜೆ ಹಾಕಿದರೇ ಅಥವಾ ಸರ್ಕಾರಿ ರಜೆ ಇದ್ದರೆ, ಮತ್ತೆ 1 ವಾರದವರೆಗೆ ಕಾಯುವ ಶಿಕ್ಷೆ ಸರಿಯೇ

ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸಾವಿರಾರು ರೂ. ನೀಡಲು ಸಾಧ್ಯವಾಗದ ಬಡವರು, ಉಚಿತ ಎಂಬ ಕಾರಣ ದೂರದ ಊರುಗಳಿಂದ ಮುಂಜಾನೆಯೇ ಬಂದಿರುತ್ತಾರೆ.

- Advertisement - 

ಆರೋಗ್ಯ ಇಲಾಖೆಯ ಇಂತಹ ಅವ್ಯವಸ್ಥೆಗಳಿಂದ ತಿಂಗಳುಗಟ್ಟಲೇ ಕಾದುಕೊಂಡಿರುವ ತುರ್ತು ಚಿಕಿತ್ಸೆ ಪಡೆಯಬೇಕಾದ ರೋಗಿಗಳ ಆರೋಗ್ಯ ಸ್ಥಿತಿ ಏನಾಗಬೇಕು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ?

ಗ್ರೇಟರ್ ಮೈಸೂರು ಮಾಡುತ್ತೇವೆಂದು ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್‌ಸರ್ಕಾರ, ತಕ್ಷಣ ಕ್ರಮ ಕೈಗೊಂಡು ಸ್ಕ್ಯಾನಿಂಗ್ ವಿಭಾಗಕ್ಕೆ ಪೂರ್ಣಕಾಲಿಕ ವೈದ್ಯರನ್ನು ನೇಮಿಸಿ, ಬಡರೋಗಿಗಳ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

Share This Article
error: Content is protected !!
";