ರಾಜ್ಯದ 11 ವಿಶ್ವವಿದ್ಯಾಲಯಗಳಲ್ಲಿ ಒಬ್ಬನೇ ಒಬ್ಬ ಖಾಯಂ ಬೋಧಕ ಇಲ್ಲ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ 11 ವಿಶ್ವವಿದ್ಯಾಲಯಗಳಲ್ಲಿ ಒಬ್ಬನೇ ಒಬ್ಬ ಖಾಯಂ ಬೋಧಕ ಅಥವಾ ತಾತ್ಕಾಲಿಕ ಸಿಬ್ಬಂದಿ ಇಲ್ಲದಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸುತ್ತಿರುವುದಕ್ಕೆ ನಿದರ್ಶನ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

 ಬೆಂಗಳೂರು , ತುಮಕೂರು, ಮಂಡ್ಯ ಮತ್ತು ಹಾಸನ ವಿವಿಗಳೂ ಸೇರಿ ಒಟ್ಟು 692 ಬೋಧಕ ಹಾಗೂ 1,168 ಬೋಧಕೇತರ ಹುದ್ದೆಗಳು ಖಾಲಿಯಿದ್ದರೂ, ಭರ್ತಿ ಮಾಡದ ಸಿದ್ದರಾಮಯ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ಟೀಕಾ ಪ್ರಹಾರ ಮಾಡಿದೆ. 

- Advertisement - 

ರಾಜ್ಯ ಸರ್ಕಾರದ ಅನುದಾನವಿಲ್ಲದೇ, ಆರ್ಥಿಕ ಬಿಕ್ಕಟ್ಟಿನಿಂದ ಕನಿಷ್ಠ ಮೂಲಸೌಕರ್ಯ, ಸಿಬ್ಬಂದಿಗೆ ವೇತನ ನೀಡದೆ, ರಾಜ್ಯದ ಹಲವು ವಿವಿಗಳು ಮುಚ್ಚುವ ಹಂತಕ್ಕೆ ಬಂದಿವೆ. ಮತ್ತೊಂದು ಕಡೆ ಭೋದಕರಿಲ್ಲದೆ, ಶೈಕ್ಷಣಿಕ ಗುಣಮಟ್ಟ ಕುಸಿತವು ವಿದ್ಯಾರ್ಥಿಗಳ ಭವಿಷ್ಯಕ್ಕೂ ಕುತ್ತು ತಂದಿದೆ.   

ದಪ್ಪ ಚರ್ಮದ ಕಾಂಗ್ರೆಸ್‌ಸರ್ಕಾರ ಇನ್ನಾದರೂ ಎಚ್ಚೆತ್ತು ಖಾಲಿ ಇರುವ ಶೇ.70ರಷ್ಟು ಬೋಧಕ ಹುದ್ದೆಗಳನ್ನು ಭರ್ತಿ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಬೇಕಿದೆ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement - 

 

Share This Article
error: Content is protected !!
";