ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವಾಕಿಂಗ್ ಮಾಡುತ್ತಿದ್ದ ವೃದ್ಧ ಮಹಿಳೆಯ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿದ್ದು, ಕಳವಾದ ಸರವನ್ನ ಮಹಿಳೆಗೆ ಇನ್ಸ್ ಪೆಕ್ಟರ್ ಸಾಧಿಕ್ ಪಾಷರವರು ವಾಪಸ್ಸು ನೀಡಿದರು.
ಪೊಲೀಸರ ಕಾರ್ಯಕ್ಕೆ ವೃದ್ಧ ಮಹಿಳೆ ಕೃತಜ್ಞತೆ ಸಲ್ಲಿಸಿದರು. 2024ರ ಸೆಪ್ಟೆಂಬರ್ 19ರಂದು ಗುಂಜೂರು ಗ್ರಾಮದ ಶೈಲಜಾ ಎಂಬ ಮಹಿಳೆ ಬೆಳಗ್ಗೆ ಹೆದ್ದಾರಿಯಲ್ಲಿ ವಾಕಿಂಗ್ ಮಾಡುತ್ತಿದ್ದರು ಈ ವೇಳೆ ಕೆಂಪು ಬಣ್ಣದ ಶಿಫ್ಟ್ ಕಾರ್ ನಲ್ಲಿ ಬಂದ ಅಪರಿಚಿತ ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಆರೋಪಿ ಕೆಂಪು ಬಣ್ಣದ ಜರ್ಕಿನ್ ,ಕಪ್ಪುಬಣ್ಣದ ಪ್ಯಾಂಟುಗಳನ್ನು ಧರಿಸಿರುತ್ತಾನೆಂಬ ಮಾಹಿತಿಯನ್ನ ಮಹಿಳೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬೆನ್ನತ್ತ ಪೊಲೀಸರು ಆತನನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಕಳವು ಮಾಡಲಾದ ಚಿನ್ನದ ಸರವನ್ನ ಕಳ್ಳನಿಂದ ಪಡೆದ ಪೊಲೀಸರು ಮತ್ತೆ ವೃದ್ಧೆಗೆ ಸರವನ್ನ ವಾಪಸ್ಸು ಮಾಡಿದ್ದಾರೆ.