ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ತೇರಿನ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟ ರಮಣ ಸ್ವಾಮಿ ದೇವಾಲಯದಲ್ಲಿ ಹುಂಡಿ ಬೀಗ ಒಡೆಯಲು ಕಳ್ಳರು ವಿಪಲ ಯತ್ನ ನಡೆಸಿರುವ ಘಟನೆ ನಡೆದಿದೆ.
ಕಳೆದ ಗುರುವಾರ ತಡ ರಾತ್ರಿಯಲ್ಲಿ ಕಳ್ಳರು ದೇವಸ್ಥಾನದ ಎಡ ಭಾಗದಲ್ಲಿರುವ ಗೇಟ್ ಮುರಿದು ದೇವಾಲಯದ ಒಳ ಹೊಕ್ಕು ಹುಂಡಿಯ ಬೀಗವನ್ನು ಒಡೆಯಲು ಯತ್ನಿಸಿ ಸಾಧ್ಯವಾಗದಿದ್ದಾಗ ಪ್ರಯತ್ನ ಕೈ ಬಿಟ್ಟು ಪರಾರಿಯಾಗಿದ್ದಾರೆ.
ಈ ಘಟನೆ ಕುರಿತಂತೆ ನಗರ ಠಾಣೆ ಪೊಲೀಸರು ಬೇಟಿ ಇತ್ತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಾಲಯದ ಸಿ ಸಿ ಟಿವಿ ಯಲ್ಲಿ ಕಳ್ಳರ ಚಲನ ವಲನಗಳು ಸೆರೆಯಾಗಿವೆ ಎನ್ನುವ ಮಾಹಿತಿ ಇದೆ ಎನ್ನಲಾಗಿದ್ದು ಪೊಲೀಸರು ಸೂಕ್ತ ತ್ವರಿತ ಕ್ರಮಕ್ಕೆ ತನಿಖೆ ಕೈಗೊಂಡಿದ್ದಾರೆ.

