ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಕಳ್ಳರ ಗ್ಯಾಂಗೊಂದು ಹೋಲ್ ಸೇಲ್ ಕಿರಾಣಿ ಅಂಗಡಿ ಎದುರು ಇರಿಸಿದ್ದ ಉಪ್ಪಿನ ಚೀಲಗಳನ್ನು ಕದ್ದಿರುವ ಘಟನೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆದಿದೆ.
ಹರಿಹರದ ಕೆ.ಆರ್.ನಗರ ಸೇರಿದಂತೆ ವಿವಿಧ ಕಿರಾಣಿ ಅಂಗಡಿಗಳ ಮುಂದೆ ಲಾಟ್ ಹಾಕಲಾಗಿದ್ದ ಉಪ್ಪಿನ ಚೀಲಗಳನ್ನು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಕಳ್ಳತನ ಮಾಡಿರುವ ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಕರಣ ದಾಖಲಾಗಿದ್ದು ಹರಿಹರ ನಗರ ಠಾಣೆಯ ಪೊಲೀಸರು ಇಬ್ಬರು ಉಪ್ಪು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

