ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ನೂತನ ಉಪ ನಿರ್ದೇಶಕರಾಗಿ ಕೆ. ತಿಮ್ಮಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನೂತನ ಉಪ ನಿರ್ದೇಶಕರನ್ನು ಪ್ರಾಚಾರ್ಯರು ಮತ್ತು ಉಪನ್ಯಾಸಕರು ಕಚೇರಿಯಲ್ಲಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಉಪ ನಿರ್ದೇಶಕ ತಿಮ್ಮಯ್ಯ, ನಾನು ಈ ಜಿಲ್ಲೆಯವನಾಗಿದ್ದು ಈ ಜಿಲ್ಲೆಯಲ್ಲಿ ಉಪನ್ಯಾಸಕರಾಗಿ ಮತ್ತು ಪ್ರಾಚಾರ್ಯರಾಗಿ ಹಾಗೂ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.
ಹಾಗಾಗಿ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಅರಿವು ನನಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಹಕಾರ ಪಡೆದು ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ ಜಿಲ್ಲೆಗೆ ಕೀರ್ತಿ ತರುತ್ತೇನೆ ಹಾಗೂ ಜಿಲ್ಲೆಯ ಉಪ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ. ಇದು ನನ್ನ ಅತ್ಯಂತ ಕಾಳಜಿ ಕೆಲಸವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರ ಪತ್ನಿ ಮುಖ್ಯೋಪಾದಯಿನಿ ಸುವರ್ಣಮ್ಮ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ಪ್ರಾಚಾರ್ಯರಾದ ವಸಂತ್ ಕುಮಾರ್, ಲಲಿತಮ್ಮ, ಡಾ. ಬಿ. ಕೃಷ್ಣಪ್ಪ, ಪುಷ್ಪಲತಾ, ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ತಿಮ್ಮಣ್ಣ, ಭೀಮರೆಡ್ಡಿ, ಉಪನ್ಯಾಸಕರುಗಳಾದ ಅಭಿಬುಲ್ಲಾ, ಜಬೀವುಲ್ಲಾ, ಚಂದ್ರಶೇಖರ್, ಚನ್ನಬಸಪ್ಪ, ಡಾ. ರೇಖಾ, ಶಾಂತಕುಮಾರಿ, ಎಂ ಶ್ರೀನಿವಾಸ್, ಹೀನಾಕೌಸರ್, ವೀರಣ್ಣ, ತಿಪ್ಪೇಸ್ವಾಮಿ, ಕೆಂಚವೀರಪ್ಪ ಮುಂತಾದವರು ಉಪಸ್ಥಿತರಿದ್ದರು.