ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿಮ್ಮ ಮಕ್ಕಳಿಗೆ ಉತ್ತಮ ಶಾಲೆ ಹುಡುತ್ತಿದ್ದೀರಾ?, ಮಕ್ಕಳ ಭವಿಷ್ಯ ರೂಪಿಸುವಂತ ಶಾಲೆ ಯಾವುದು, ಬರೀ ಜಾಹೀರಾತು ನೀಡಿ ಮಕ್ಕಳು, ಪೋಷಕರನ್ನ ವಂಚಿಸುವಂತ ಶಾಲೆ ಯಾವುದು, ಆ ಶಾಲೆಯ ಶಿಕ್ಷಕರು, ಮೂಲ ಸೌಲಭ್ಯ, ಶಿಕ್ಷಣ ಪರಿಕರಗಳು, ಆಟದ ಮೈದಾನ, ಶಾಲೆಯ ಪರೀಕ್ಷಾ ಫಲಿತಾಂಶಗಳ ಇತಿಹಾಸ ಎಲ್ಲವನ್ನು ಪರಿಶೀಲಿಸಿ ಉತ್ತಮ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದರೆ ಖಂಡಿತಾ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಸಾಧ್ಯವಿದೆ.
ಅಂಥಹ ಶಾಲೆ ಎಲ್ಲಿದೆ ಎಂದು ಹುಡುಕುತ್ತಿದ್ದೀರಾ, ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ನಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ಗೆ ಮಕ್ಕಳನ್ನು ಸೇರಿಸಿದರೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಆ ಶಾಲೆಯ ಪ್ರಾಂಶುಪಾಲರು.
ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎಂ.ಎ ಸೇತುರಾಮ್, ಅಧ್ಯಕ್ಷೆ ಸೀಮಾ ಎಸ್, ಕಾರ್ಯದರ್ಶಿ ಎಸ್.ಶ್ರೀಹರ್ಷ ಇವರುಗಳ ಒಡೆತನದ ಖಾಸಗಿ ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲೆ ಶ್ವೇತಾ ಕಿರಣ್ ಇವರ ಬಿಗಿ ಆಡಳಿತದಿಂದಾಗಿ ಮತ್ತು ಅಧ್ಯಕ್ಷೆ ಸೀಮಾ ಅವರ ಮಾರ್ಗದರ್ಶನದಡಿಯಲ್ಲಿ 1 ರಿಂದ 10ನೇ ತರಗತಿಯ ಸಿಬಿಎಸ್ಸಿ ಶಾಲೆಯ ಖದರೇ ಬದಲಾಗಿದೆ. ಶಾಲಾ ಫಲಿತಾಂಶ ನೋಡಿ ಬಂದವರೆಲ್ಲಾ ಶಾಲೆ ಅಂದರೆ ಹೀಗಿರಬೇಕು ಎನ್ನುವ ರೀತಿಯಲ್ಲಿ ಬದಲಾಗಿದೆ ಎನ್ನುತ್ತಾರೆ.
ಕಲಿಕಾ ಉಪಕರಣಗಳು, ಮೂಲ ಸೌಕರ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಕಾಂಪೌಂಡ್, ನುರಿತ ಪರಿಣತಿ ಜ್ಞಾನ ಹೊಂದಿದ ಶಿಕ್ಷಕರು, ಇಂಗ್ಲಿಷ್ ಮಾಧ್ಯಮ, ಶಿಕ್ಷಕರು ಮಕ್ಕಳ ಮಧ್ಯದಲ್ಲಿರುವ ಮಧುರ ತಾಯ್ತನದ ಬಾಂಧವ್ಯ, ಮೂಲಭೂತ ಸೌಕರ್ಯಗಳಿಂದಾಗಿ ಚಿತ್ರದುರ್ಗದ ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ ಮನೆ ಮಾತಾಗಿದೆ.
ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮಕ್ಕಳ ಬಗ್ಗೆ ವಹಿಸುತ್ತಿರುವ ಕಾಳಜಿ, ಮಕ್ಕಳಿಗೆ ಯೋಗ ಮತ್ತು ಕರಾಟೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲೆಯಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಮತ್ತು ಸುಧಾರಿತ ಸೌಕರ್ಯಗಳಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುವುದರೊಂದಿಗೆ ಫಲಿತಾಂಶ ಕೂಡ ವರ್ಷ ದಿಂದ ವರ್ಷಕ್ಕೆ ಮೇಲ್ಮುಖವಾಗಿ ಸಾಗುತ್ತಿದೆ.
ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ ಕಾರ್ಯದರ್ಶಿ ಶ್ರೀಹರ್ಷ ಪತ್ರಿಕೆಯೊಂದಿಗೆ ಮಾತನಾಡಿ ಪ್ರಸಕ್ತ ಸಾಲಿನ ಸಿಬಿಎಸ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100ರಷ್ಟು ಫಲಿತಾಂಶ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಮಕ್ಕಳು ಕೀರ್ತಿ ತಂದಿದ್ದಾರೆ. ಕಳೆದ 8 ವರ್ಷಗಳಿಂದಲೂ ಈ ಶಾಲೆಯ ಮಕ್ಕಳು ಶೇ.ನೂರಷ್ಟು ಪಾಸ್ ಆಗುವ ಮೂಲಕ ದಾಖಲೆ ನಿರ್ಮಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲೂ ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಮೂರು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 14 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, 4 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸ್ಟೆಪ್ಪಿಂಗ್ ಸ್ಟೋನ್ಸ್ ಶಾಲೆಗೆ ಮಕ್ಕಳನ್ನು ಸೇರಿಸುವಂತ ಪೋಷಕರು ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಶ್ರೀಹರ್ಷ ಇವರು ತಿಳಿಸಿದ್ದಾರೆ. ಶಾಲೆಯ ದೂರವಾಣಿ ಸಂಖ್ಯೆ: 9686791923/ 6362543879