ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಗೊಂಚಿಗೆರ್ ತಿಪ್ಪಮ್ಮ ನಾಗರಾಜ್ ನಾಮಪತ್ರವನ್ನು ಒಬ್ಬರೇ ಸಲ್ಲಿಸಿದ್ದರಿಂದ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ತಾಲೂಕು ದಂಡಾಧಿಕಾರಿ ವಿ ಕೆ ನೇತ್ರಾವತಿ ಇವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ತಿಪ್ಪಮ್ಮ ಗೊಂಚಿಗೆರ್ ನಾಗರಾಜ್ ಅವಿರೋಧವಾಗಿ ಆಯ್ಕೆಯಾದ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರನ್ನಾಗಿ ತಹಶೀಲ್ದಾರ್ ವಿಕೆ ನೇತ್ರಾವತಿ ಅವರು ಪೋಷಣೆ ಮಾಡಿ ಮಾತನಾಡಿ ಜನರಿಂದ ಮತ ಪಡೆದು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ. ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಸೇರಿ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ನೀಗಿಸಬೇಕು. ಸಮಸ್ಯೆಗಳನ್ನು ಹಿಡಿದು ಜನರು ಪರಿದಾಡಬಾರದು ಮತ್ತು ನಮ್ಮ ಇಲಾಖೆಗೆ ಸಂಬಂಧಪಡುವ ಯಾವುದೇ ಜನರ ಕೆಲಸವಾಗಲಿ ನಾನು ಮತ್ತು ನಮ್ಮ ಸಿಬ್ಬಂದಿಗಳು ತುರ್ತಾಗಿ ಮಾಡುತ್ತೇವೆ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ನೇತ್ರಮ್ಮ ಜಿ ಓಬಣ್ಣ ಮಾತನಾಡಿ ನಮ್ಮ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಸಿಬ್ಬಂದಿಗಳು ತಹಶೀಲ್ದಾರರು ತಿಳಿಸಿದ ಹಾಗೆ ನಿಷ್ಠೆಯಿಂದ ಗ್ರಾಮಗಳಲ್ಲಿ ಸಮಸ್ಯೆ ಆಲಿಸಿ ಜನರ ಸೇವೆ ಮಾಡಬೇಕು, ವಿನಾ ಕಾರಣ ಸಾರ್ವಜನಿಕರನ್ನ ಕಚೇರಿಗಳಿಗೆ ಅಲೆಸಬಾರದು ನಿಮ್ಮ ಸೇವೆಗೆ ನಾನು ಸಹ ಜೊತೆ ಇರುತ್ತೇನೆ ಎಂದರು.
ಅಧ್ಯಕ್ಷರ ಚುನಾವಣೆಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷೆ ಸಾಕಮ್ಮ ಕೆ ಓಬಣ್ಣ ಉಪಾಧ್ಯಕ್ಷೆ ಸಾವಿತ್ರಮ್ಮ ಗುರುಜಿನಯ್ಯ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ. ಬಿ ನಿಂಗಪ್ಪ, ತಾಪಂ ಮಾಜಿ ಸದಸ್ಯ ಶೃತಿ ವೆಂಕಟೇಶ್, ಸದಸ್ಯರುಗಳಾದ ಸಾಕಮ್ಮ ಬೋರಣ್ಣ, ಚನ್ನಬಸಮ್ಮ ಬೂದಿ ಬಸಣ್ಣ, ಎಚ್. ಪಾಪಣ್ಣ, ದಾಸಯ್ಯ, ಜಿ.ಮಲ್ಲಪ್ಪ, ಗೌಡ್ರು ಸಣ್ಣ ಓಬಯ್ಯ, ಗಂಗಮ್ಮ ಆರ್.ರುದ್ರೇಶ್, ಬೋಸೆ ಪಾಪಣ್ಣ, ಭಾಗ್ಯಮ್ಮ ಸೋಮನಗೌಡ, ದುರ್ಗಮ್ಮ ದುರ್ಗಪ್ಪ, ತಮ್ಮಯ್ಯನ ಗುಡ್ಡ ಬಸಣ್ಣ, ಅನಸೂಯಮ್ಮ ಅಂಜಿನಪ್ಪ, ನೀಲಮ್ಮ ಡಿಕೆ ಓಬಣ್ಣ, ಕೆ ತಿಪ್ಪೇಸ್ವಾಮಿ, ವಾಲ್ಮೀಕಿ ಯುವ ಮುಖಂಡ ಸೂರ್ಯಪ್ರಕಾಶ್, ಗ್ರಾಮ ಆಡಳಿತ ಅಧಿಕಾರಿ ಚನ್ನಬಸಯ್ಯ, ಕಂದಾಯ ಇಲಾಖೆ ಸಿಬ್ಬಂದಿಗಳಾದ ಶಿವಕುಮಾರ್, ವಾಸು, ಶಾಂತರಾಜ್, ಗ್ರಾಮದ ಮುಖಂಡರುಗಳಾದ ಜಿ ಎಸ್ ಪಾಪ ಮುತ್ತಿ,
ಈ ಶರಣೇಶ್, ಜಿ ಚಂದ್ರಶೇಖರಪ್ಪ, ಜಿ ಸೋಮಶೇಖರ, ಪೂಜಾರಿ ಪಾಲಣ್ಣ, ಎಂ ಲೋಕಣ್ಣ, ತಿಪ್ಪಮ್ಮ ಗೊಂಚಿಗೆರ್ ಬೋರಯ್ಯ, ಎ ತಿಪ್ಪೇಸ್ವಾಮಿ, ಸಣ್ಣ ಲೋಕೇಶ್, ಗೋಪಾಲಿ, ಟಿಡಿ ಪಾಪಣ್ಣ, ಗುಂಡು ಮುಣಗು ಮಂಜಣ್ಣ, ಮುದ್ರಯ್ಯನ ನಾಗರಾಜ್, ಗೋಚಿಗೇರ್, ಸಣ್ಣ ಬೋರಯ್ಯ,
ಹುಡೇಂ ರಾಮಚಂದ್ರಣ್ಣ, ಡ್ರೈವರ್ ರಾಮಣ್ಣ, ದದ್ರೆ ಮಲ್ಲಯ್ಯನವರ ನಾಗರಾಜ್, ಬಿ ದೇವರಾಜ್, ಹಾಗೂ ಇನ್ನೂ ಅನೇಕ ಮುಖಂಡರು ಗ್ರಾಮಸ್ಥರು ಯುವಕರು ಗ್ರಾಪಂ ಸಿಬ್ಬಂದಿ, ಲೈಬ್ರರಿ ಮುಖ್ಯಸ್ಥರು ಇದ್ದರು. ಹೊಸಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.