ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನಿಟ್ರ್ಯಾಪ್, ಫೋನ್ ಟ್ಯಾಪ್‌ಅಬ್ಬಬ್ಬಾ ಇದೇನು ಸರ್ಕಾರವೋ ಅಥವಾ ನೀಲಿ ಚಿತ್ರ ತಯಾರಿಸುವ ಕಂಪನಿಯೋ? ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಹನಿಟ್ರ್ಯಾಪ್‌ಕುರಿತು ಭಾರತೀಯ ಕಾಂಗ್ರೆಸ್ ಗೆ ದೂರು ಕೊಡ್ತೀನಿ ಅಂತ ಸಚಿವರು ಕೂತಿದ್ರೆ, ಕರ್ನಾಟಕದ ಕಾಂಗ್ರೆಸ್ ಶಾಸಕರು ಫೋನ್‌ಟ್ಯಾಪ್‌ಕುರಿತು ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಆ ದಿನಗಳ ಟೆಂಟ್‌ಮತ್ತೊಮ್ಮೆ ರಾಜ್ಯದಲ್ಲಿ ಓಪನ್‌ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಇಷ್ಟೆಲ್ಲಾ ಅನಾಚಾರಗಳು ನಡೆಯುತ್ತಿದ್ದರೂ ಯಾವ ಮುಖ ಇಟ್ಟುಕೊಂಡು ಇನ್ನು ಕುರ್ಚಿಯಲ್ಲಿ ಕೂತಿದ್ದಿರಿ? ರಾಜೀನಾಮೆ ಕೊಡಿ. ಇಲ್ಲವೇ ಫೋನ್‌ಟ್ಯಾಪ್, ಹನಿಟ್ರ್ಯಾಪ್‌ಮಾಡಿದವರ ಬಣ್ಣ ಬಯಲು ಮಾಡಿ ಸಮಾಜದ ಮುಂದೆ ಬೆತ್ತಲುಗೊಳಿಸಿ ಎಂದು ಬಿಜೆಪಿ ತಾಕೀತು ಮಾಡಿದೆ.