ಇದು ಕಥೆಯಲ್ಲ ರೈತಾಪಿ ಬದುಕಿನ ಸಂದೇಶ

News Desk

ಚಂದ್ರವಳ್ಳಿ ನ್ಯೂಸ್, ಹೊಸದುರ್ಗ;
ರೈತರೊಂದಿಗೆ ನಾವು………..ಡಿಸೆಂಬರ್ ತಿಂಗಳ
23 ಈ ದಿನ ರಾಷ್ಟ್ರೀಯ

ರೈತ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನದಲ್ಲಿ  ರೈತಾಪಿ ಬದುಕಿನ ಕಷ್ಟಸುಖಗಳನ್ನು ತಿಳಿಯೋಣ ರೈತರನ್ನು ಗೌರವಿಸೋಣ. ಪ್ರಕೃತಿ ನಂಬಿ ದುಡಿಮೆ ಮಾಡುವ ಕೃಷಿಕರು ಸಮಾಜದ ಧ್ಯೇಯೋದ್ದೇಶಕ್ಕೆ ಶ್ರಮಿಸುತ್ತಿರುವ ನಿಸ್ವಾರ್ಥಿಗಳು. ಕೃಷಿ ದುಡಿಮೆಯ ಫಲವನ್ನು ಸಂತೋಷವಾಗಿ ಸ್ವೀಕರಿಸುವ ಪುಣ್ಯಾತ್ಮರು ರೈತರು.

ಕೃಷಿ ಬೆಳೆಗಳಿಗೆ ದರ ನಿಗದಿಯಿರುವುದಿಲ್ಲ. ಆ ಕಾರಣಕ್ಕೆ ಲಾಭಾಂಶದ ನಿರೀಕ್ಷೆಯನ್ನೇ ಮಾಡದೆ ರೈತರು ಹೊಲಗಳಲ್ಲಿ ದುಡಿಯುತ್ತಾರೆ. ಪ್ರಕೃತಿ ವೈಫಲ್ಯದಿಂದಾಗಿ ಮಳೆ ಕಡಿಮೆಯಾದರೆ ಸಸ್ಯರಾಶಿಗಳು ಬೆಳವಣಿಗೆಯಲ್ಲಿ ಕ್ಷೀಣಿಸುತ್ತವೆ ಅದರಂತೆಯೇ ಅಕಾಲಿಕವಾಗಿ ಮಳೆ ಹೆಚ್ಚಾದಾಗ ಕೀಟ ಬಾಧೆಗೆ ದವಸಧಾನ್ಯಗಳು ಸೇರಿದಂತೆ ಹೂವು ಹಣ್ಣು ತರಕಾರಿಗಳಿಗೆ ಹಾನಿಕಾರಕ.

ಇದರಿಂದಾಗಿ ಬೆಲೆಯಲ್ಲಿಯು ಬಹಳಷ್ಟು ಕುಸಿತವಾಗುತ್ತದೆ. ರೈತಾಪಿ ಬದುಕು ಒಂದು ರೀತಿಯಾಗಿ ನೀರಿನ ಮೇಲೆ ಗುಳ್ಳೆಯಿದಂತೆ. ಕೃಷಿಯಲ್ಲಿ ಎಷ್ಟೇ  ಕಷ್ಟನಷ್ಟಗಳಿದ್ದರು ರೈತರು ಎದೆಗುಂದುವುದಿಲ್ಲ ಕೃಷಿಯನ್ನು ಬಿಟ್ಟು ಬದುಕುವುದಿಲ್ಲ .

ರೈತರಿಗೆ ಕೃಷಿಯೇ ಜೀವಾಳ. ರೈತರ ಭಂಡತನದ ಧೈರ್ಯವನ್ನು ಮೆಚ್ಚಲೇಬೇಕು. ರೈತರ ಕಾಯಕದ ಋಣವನ್ನು ಯಾರಿಂದಲೂ ತೀರಿಸಲು ಅಸಾಧ್ಯ.‌ಪ್ರಕೃತಿ ವಿಕೋಪದಲ್ಲಿ ಕೃಷಿ ಇಳುವರಿಗೆ ನಷ್ಟವಾದ ಸಂದರ್ಭಗಳಲ್ಲಿ ಪ್ರಭುತ್ವದ ಸರ್ಕಾರಗಳು ರೈತರ ಪರವಾಗಿ  ಪ್ರಾಮಾಣಿಕವಾಗಿ ಹಾಗೂ ಧಾರಾಳವಾಗಿ ಸ್ಪಂದಿಸಬೇಕು.

ಇದು ರೈತರ ಪರವಾದ ಮನವಿ. ಈ ವಿಚಾರ  ಸರ್ಕಾರದ ಆಡಳಿತಕ್ಕೆ ಮುಟ್ಟಿಸಲು ಸಾಮಾಜಿಕ ಚಿಂತಕರಿರುವರು ಎಂಬ ವಿಶ್ವಾಸ ನನಗಿದೆ. ಸಮಸ್ತ ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಭಾರತ ದೇಶ ಗ್ರಾಮೀಣ ಪರಂಪರೆಯಲ್ಲಿ ಬೆಳೆದಿರುವ  ಬಲಾಡ್ಯ ದೇಶ. ಸರಿಸುಮಾರು ಶೇ.50ಕ್ಕೂ ಹೆಚ್ಚು ಜನತೆ ಜೀವನೋಪಾಯಕ್ಕೆ ಕೃಷಿಗೆ ಅವಲಂಬಿತ್ತರಾಗಿದ್ದಾರೆ. ದೇಶದ ಬಹುಪಾಲು ಜನರು ಗ್ರಾಮೀಣ ಪ್ರಾಂತ್ಯದಲ್ಲಿಯೇ ವಾಸಿಸುತ್ತಿದ್ದಾರೆ.

ಗ್ರಾಮೀಣ ಪ್ರಾಂತ್ಯದ ರೈತರ ಬದುಕು ಒಂದು ರೀತಿಯ ಸೇವೆಯ ಪ್ರತಿರೂಪ. ಕೃಷಿ ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ಇದ್ದದ್ದೇ. ದೇಶದ ಆರ್ಥಿಕತೆಗೆ ಕೃಷಿ ಕೊಡುಗೆ ದೊಡ್ಡದಿದೆ. ಈ ಎಲ್ಲಾ ವಿಚಾರವನ್ನು ನಾಡಿನ ಜನತೆಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಡಲು ನನ್ನದೊಂದು ಚಿಕ್ಕ ಪ್ರಯತ್ನ ಇದಾಗಿದೆ.

ಪಾವಗಡ ತಾಲ್ಲೂಕಿನ ಕೊಂಡೆತಿಮ್ಮನಹಳ್ಳೀ ನನ್ನುರು. ಒಕ್ಕಲುತನದ ಕುಟುಂಬದಲ್ಲಿ ಜನಿಸಿರುವ ನಾನು  ಕೃಷಿ ಕಾಯಕದ ಕಷ್ಟ ಸುಖ ಎರಡನ್ನು ಕಂಡಿದ್ದೇನೆ. ನಮ್ಮ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ರೈತಾಪಿಗಳಿಗೆ ನಮ್ಮ ಪೂರ್ವಿಕರ ವ್ಯವಸಾಯದ ಬದುಕು ಗೌರವದ ಪ್ರತೀಕವಾಗಿತ್ತು ಹಾಗೂ ಆದರ್ಶವಾಗಿತ್ತು. ಇದು ಕಥೆಯಲ್ಲ ರೈತಾಪಿ ಬದುಕಿನ ಸಂದೇಶ.
ಲೇಖನ-ರಘು ಗೌಡ
9916101265

 

- Advertisement -  - Advertisement - 
Share This Article
error: Content is protected !!
";