ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಸರಿ ನಂದನ ಸಿನಿಕ್ರಿಯೇಷನ್ ಲಾಂಛನದಲ್ಲಿ ನವನೀತ್ ಲಕ್ಷ್ಮಿ, ಕೆಆರ್ ಸುರೇಶ್ ನಿರ್ಮಿಸಿರುವ ” ವಿಕ್ಕಿ” ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ.
ಚಿತ್ರವನ್ನು ದೀಪಕ್ ಎಸ್ ಅವಂದಕರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.ಮಧ್ಯಮ ವರ್ಗದ ಯುವಕನ ಕನಸುಗಳ ಸುತ್ತ ಕಥೆ ಎಣೆಯಲಾಗಿದೆ.ಅದನ್ನು ನನಸು ಮಾಡಿಕೊಳ್ಳಲು ಹೋದಾಗ ಏನೆಲ್ಲಾ ಆಗಬಹುದು ಎನ್ನುವುದನ್ನು ಹಾಸ್ಯಮಯವಾಗಿ ಹೇಳಹೊರಟಿದ್ದಾರೆ.
ಚಿತ್ರಕ್ಕೆ ಅರವ್ ರಿಷಿಕ್ ಸಂಗೀತ, ಶಂಭು ಛಾಯಾಗ್ರಹಣ, ಭಾರ್ಗವ ಕೆ.ಎಂ ಸಂಕಲನ,ರಾಜೇಶ್ ಬೀರಬ್ಬಿ ಸಹ ನಿರ್ದೇಶನ, ರಾಮ್ ಕುಮಾರ್ ಕೆ ಡಬ್ಬಿಂಗ್ ಇಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಚಿತ್ರದಲ್ಲಿ ರಾಜು ತಾಳಿಕೋಟೆ, ಭರತ್ ತಾಳಿಕೋಟೆ, ಶ್ರೀನಿಧಿ, ವಿಂದ್ಯಾ ಹೆಗಡೆ,ಮಂಜು ಗುಳೆದಗುಡ್ಡ,ಪ್ರದೀಪ್, ರವಿಶೆಟ್ಡಿ, ಶರತ್, ಧನಲಕ್ಷಿ, ಹನುಮಂತ ರಾಜು,ಉಮಾಕಾಂತ್ ,ಹರೀಶ್ ದಾಂಡೇಲಿ,ರಂಗ, ಮಹೇಶ್, ನೇಹ, ಕರ್ಣ, ಸತೀಶ್, ಮಾಸ್ಟರ್ ಮಯೂರ್ ಚೌಗಲೆ,ಬೇಬಿ ವರ್ಣಿತ ತಾರಾಗಣದಲ್ಲಿದ್ದಾರೆ.