ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂರನ್ನೂ ಬಿಟ್ಟವರು ರಾಜ್ಯಕ್ಕೆ ದೊಡ್ಡವರು ಎಂಬ ಗಾದೆ ಮಾತನ್ನು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನೇ ನೋಡಿ ಹಿರಿಯರು ಹೇಳಿದಂತಿದೆ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸಿದೆ.
ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮದದಲ್ಲಿ ಮುಖ್ಯಮಂತ್ರಿ ಸ್ಥಾನದ ಘನತೆಯನ್ನೇ ಹಾಳು ಮಾಡಿರುವ A1 ಆರೋಪಿ ಸಿದ್ದರಾಮಯ್ಯ ಅವರು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಕೇಸ್ ಹಾಕಿಸಿಕೊಂಡಿದ್ದರೂ,
ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಮುಜುಗರವಿಲ್ಲ ಎಂದು ಆ ದಿನಗಳ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟ A1 ಆರೋಪಿಯನ್ನು ಚಿವುಟಿ ತೊಟ್ಟಿಲು ತೂಗುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಕಳ್ಳರು, ಭ್ರಷ್ಟರು, ಭೂ ಖದೀಮರು, ಮತಾಂಧರು, ಉಗ್ರರು, ಕಿಡಿಗೇಡಿಗಳು, ಗೂಂಡಾಗಳು, ದೇಶ ದ್ರೋಹಿಗಳು, ಹಿಂದೂ ವಿರೋಧಿಗಳು ಸೇರಿದಂತೆ ಸಮಾಜಘಾತುಕರ ಬೆನ್ನಿಗೆ ನಿಲ್ಲುವುದು ಕಾಂಗ್ರೆಸ್ಸಿನ ಹುಟ್ಟುಗುಣ! ಎಂದು ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದೆ.