ನಂದಿ ಗಿರಿ ಪ್ರದಕ್ಷಿಣೆ.. ಸಾವಿರಾರು ಭಕ್ತರು ಭಾಗಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪ್ರತಿ ವರ್ಷ ಆಷಾಡ ಮಾಸದ ಕೊನೆಯ ಸೋಮವಾರ
  ನಂದಿ ಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ಸಮಿತಿಯು ನಂದಿ ಗಿರಿ ಪ್ರದಕ್ಷಿಣೆ ಇಂದು ಚಾಲನೆ ನೀಡಲಾಯಿತು ಸಾವಿರಾರು ಮಂದಿ ಭಕ್ತರು ಭಾಗಿಯಾಗಿದ್ದರು.

- Advertisement - 

ಪ್ರತಿ ವರ್ಷದಂತೆ ದೊಡ್ಡಬಳ್ಳಾಪುರ ಸಾವಿರಾರು ಭಕ್ತರು ನಂದಿ ಗ್ರಾಮದ ಭೋಗ ನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ 85 ನೇ ವರ್ಷದ ಗಿರಿ ಪ್ರದಕ್ಷಿಣೆ ಸೋಮವಾರ ಬೆಳಗ್ಗೆ 7 ಕ್ಕೆ ಚಾಲನೆ ನೀಡಲಾಯಿತು.

- Advertisement - 

  ನಂದಿಯಲ್ಲಿರುವ  ಭೋಗ ನಂದೀಶ್ವರ ದೇವರಿಗೆ  ಪೂಜೆ ಸಲ್ಲಿಸಿ ನಂದಿ ಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಿದ ನಂತರ ಕೈವಾರ ತಾತಯ್ಯನವರ ಭಜನೆ ಮಂಡಲಿ ಭಕ್ತರು ನಂದಿಗಿರಿ ಪ್ರದಕ್ಷಿಣೆ ಭಜನೆ ಮಂಡಲಿ ಮತ್ತು ಕಲಾ ತಂಡದಿಂದ ದಾರಿ ಯುದ್ದಕ್ಕೂ ಭಜನೆ  ಕೀರ್ತನೆಗಳ ಮೂಲಕ ಕುಡುವತಿ ಕ್ರಾಸ್, ಕಾರಹಳ್ಳಿ ಕ್ರಾಸ್, ಕಣಿವೇಪುರ, ನಂದಿ ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ ಗಾಂಧಿಪುರ, ಕಣಿವೆ ಬಸವಣ್ಣ ಸುಲ್ತಾನ್ ಪೇಟೆ ಮಾರ್ಗವಾಗಿ ದೇವಾಲಯ ತಲುಪುತ್ತದೆ. ಸುಮಾರು 16 ಕಿಮೀ ಸುತ್ತಳತೆಯ ಗಿರಿಯನ್ನು ಪ್ರದಕ್ಷಿಣೆಯ ಮದ್ಯದಲ್ಲಿ ಭಕ್ತರಿಗೆ ಮಂಜಿಗೆ ಪಾನಕ ಕೋಸಂಬರಿ ವ್ಯವಸ್ಥೆಯನ್ನು ಮಾಡಲಾಗಿತ್ತು.

 ನಂದಿ ಪ್ರದಕ್ಷಿಣೆ ನಂದಿ ಬೆಟ್ಟದ ಸುತ್ತಲೂ ಕಾಲ್ನಡಿಗೆಯಲ್ಲಿ ಹೋಗುವುದು ಇದು ಅಷಾಡ ಮಾಸದ ಕೊನೆಯ ಸೋಮವಾರದಂದು ನಡೆಯುತ್ತದೆ  ಸಾವಿರಾರು ಜನ ಭಕ್ತರು ಒಂದೆಡೆ ಸೇರಿ ಭೋಗ ನಂದೀಶರ ದೇವಸ್ಥಾನದಿಂದ ಪ್ರದಕ್ಷಿಣೆ ಪ್ರಾರಂಭ ವಾಗಿ ದಾರಿಯುದ್ದಕ್ಕೂ ಭಜನೆ ಮಾಡುತ್ತಾ ದೇವರ ಸ್ಮರಣೆ ಮಾಡಿ ಪ್ರಕೃತಿಯ ಸೌದರ್ಯವನ್ನ ಅನಂದಿಸುತ್ತಾ ಹೆಜ್ಜೆ ಹಾಕುತ್ತಾರೆ.

- Advertisement - 

ನಂದಿ ಬೆಟ್ಟದ ಸುತ್ತಲು ಈ ಪ್ರದಕ್ಷಣೆ  ಒಂದು ದಾರ್ಮಿಕ ಆಚರಣೆ  ಮಾತ್ರವಲ್ಲದೆ ಇದು ಆರೋಗ್ಯಕರ ಚಟುವಟಿಕೆಯೂ ಹೌದು ಈ ನಟ್ಟಿನಲ್ಲಿ ಸಾವಿರಾರು ಭಕ್ತರು ನಂದಿ ಬೆಟ್ಟದ ಪ್ರದಕ್ಷಿಣೆಯಲ್ಲಿ ಹೆಜ್ಜೆ ಹಾಕಿ ಪುಣ್ಯ ಕಟ್ಟಿ ಕೊಳ್ಳುತ್ತಾರೆ.

ನಂದಿಗಿರಿ ಪ್ರದಕ್ಷಿಣೆಯೊಂದಿಗೆ ಈ ಕಣಿವೆಯ ಗೋಪಿನಾಥ ಗಿರಿ, ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿ ಹಾಗು ಸ್ಕಂದಗಿರಿ ಪಾಪಾಗ್ನಿ ಮಠದ  ದರ್ಶನವೂ ಇರುತ್ತೆದೆ.

ಪ್ರದಕ್ಷಿಣೆಯ ನಡುವೆ ಉಪಹಾರ, ಹಾಗೂ ಪೂರ್ಣ ಪ್ರದಕ್ಷಿಣೆ ಆದ ನಂತರ ಭೋಜನದ ವ್ಯವಸ್ಥೆಯನ್ನು ಸಮಿತಿಯ ವತಿಯಿಂದ ಮಾಡಲಾಗಿತ್ತು.

 

 

Share This Article
error: Content is protected !!
";