ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮೂರು ದಿನ ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
79
ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ 2025ನೇ ಆಗಸ್ಟ್ 16, 17 ಮತ್ತು 18 ರಂದು ಮೂರು ದಿನಗಳ ರಾಜಭವನದ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸದರಿ ಮೂರು ದಿನಗಳು ಸಂಜೆ 6 ರಿಂದ 7:30 ಗಂಟೆಯವರೆಗೆ ವೀಕ್ಷಣೆ ಮಾಡಬಹುದಾಗಿದೆ.

ರಾಜಭವನದ ಪ್ರವೇಶದ ಸಂದರ್ಭದಲ್ಲಿ ಭದ್ರತಾ ತಪಾಸಣೆ:
ರಾಜಭವನದ ವೀಕ್ಷಣೆಗೆ ಆಗಮಿಸವ ಸಾರ್ವಜನಿಕರು ಸರ್ಕಾರದಿಂದ ವಿತರಿಸಿರುವ/ಸ್ಟಷ್ಟವಾಗಿ ಭಾವಚಿತ್ರವಿರುವ ಐ.ಡಿ. ಕಾರ್ಡ್‍ನ್ನು ಕಡ್ಡಾಯವಾಗಿ ತರುವುದು. ರಾಜಭವನದ ಪ್ರವೇಶದ ಸಂದರ್ಭದಲ್ಲಿ ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಪಡುವುದು. ರಾಜಭವನದ ಆವರಣದೊಳಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಸ್ಥಳಗಳನ್ನು ಬಿಟ್ಟು ಬೇರೆಡೆಗೆ ಪ್ರವೇಶಿಸಬಾರದು.

- Advertisement - 

ಸಾರ್ವಜನಿಕರು ಪ್ರವೇಶದ ಸಂದರ್ಭದಲ್ಲಿ ಮತ್ತು ಪ್ರವೇಶಿಸಿದ ನಂತರ ಭದ್ರತೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನೀಡುವ ಸಲಹೆ/ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು. ಸಾರ್ವಜನಿಕರು ರಾಜಭವನದ ಆವರಣದೊಳಗೆ ಶಾಂತಿ ಮತ್ತು ನಿಶ್ಯಬ್ದ ಕಾಪಾಡುವ ಮೂಲಕ ಸಹಕರಿಸುವುದು.

 

- Advertisement - 

 

Share This Article
error: Content is protected !!
";