ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂರು ತಲೆ ನೋವು
ಹೌದುರಿ
ಜಗತ್ತಿನಲ್ಲಿರೋದು
ಪ್ರತಿಯೊಬ್ಬರಿಗೂ
ಮೂರು ತಲೆನೋವು
ನಾನು ಹೇಳೋದೇ ಬೇರೆ
ನಿವಂದಕೋಡಿದ್ದೆ ಬೇರೆ
ಮಗನಿಗೆ ನಮ್ಮಲ್ಲಿ
ಹೆಣ್ಣೇ ಸಿಗತಾ ಇಲ್ಲ
ನಮ್ಮ ಮಗಳ ಸಂಬಳಕ್ಕಿಂತ ಕಮ್ಮಿ
ಹುಡುಗ ಹುಡುಗಿ ಒಪ್ಪಿದರೆ
ಆಯ್ತು ನಮ್ಮದೇನಿಲ್ಲ
ಮದುವೆ ಆದಮೇಲೆ
ಅಪ್ಪ ಅಮ್ಮ ಎಲ್ಲಿರ್ತಾರೆ
ಇದೆ ಅಲ್ವಾ , ಇದೊಂದು ತಲೆ ನೋವಲ್ಲಾರಿ
ಮಗಳು ಯಾವುದೋ
ಹುಡುಗನ್ನ, ಮಗ ಯಾವುದೋ ಜಾತಿ
ಹುಡುಗಿನ ಲವ್
ಮಾಡಿದ್ದಾನ್ರಿ ,
ನಮಗೆ ಒಬ್ಬಳೇ ಮಗಳು
ಬೇಕಾದಷ್ಟು ಆಸ್ತಿ ಇದೆ
ಎಂತ್ವನು ಸಿಗ್ತವನೋ ಏನೋ ಅನ್ಕೊತಿದಿರಲ್ವ
ಇದೆಲ್ಲ ತಲೆನೋವಲ್ಲರಿ
ನಿಮ್ಮ so called famous ದೇವರ ದರ್ಶನಕ್ಕೆಂದು ದಿನ
ಗಟ್ಟಲೆ Q ನಿಲ್ಲೋದು
ಆದರಂಥ
ತಲೆ ನೋವು ಯಾವುದಿದೆ ಕಣ್ರೀ
ಮನೆ ಕೆಲಸದವಳು
ಒಂದು ವಾರ ರಜ
ಹಾಕಿದ್ರೆ, ನಾವೇ ,ಮನೆ
ಕೆಲಸ ಮಾಡ್ಕೊಳ್ಳೋದು ಇದೆಯಲ್ಲ ಅದರಂಥ
ತಲೆ ನೋವು ಯಾವುದಿದೆ ಕಣ್ರೀ
ಮನೆ ನಲ್ಲಿ, ಕಮೋಡು,
ಅರ್ಸಿಸಿ ಸೋರ್ತ ಇದೆ
ಡ್ರೈನೇಜ್ ಬ್ಲಾಕ್ ಆಗಿದೆ
ಗ್ಯಾಸ್ ಲೀಕ್ ಆಗ್ತಾ ಇದೆ
ರಿಪೇರಿ ಮಾಡೋನು ಬರ್ತೀನಿ ಅಂತಾನೆ
ಫೋನೇ ಎತ್ತಲ್ಲ ತುಂಬಾ ಸತಾಯಿಸ್ತಾ ಇದಾನೆ
ಅದರಂಥ ತಲೆ ನೋವು ಯಾವುದಿದೆ ಕಣ್ರೀ
ನೋಡ್ತಾ ನೋಡ್ತಾ ಮಕ್ಕಳ
ಮದುವೆ ಆಗುತ್ತೆ , ನಿಧಾನಕ್ಕೆ ಮಕ್ಳು ಆಗ್ತಾವೆ
once for all ಸೆಟ್ಲ್ ಆಗುತ್ತೆ ಜೀವನ ಒಂದು
ಹಂತಕ್ಕೆ ಬಂದು ಹೋಗುತ್ತೆ
ಬದುಕಿರುವವರೆಗೂ
ನಾ ಹೇಳಿದ ಈ ಮೂರರಂತಹ
ಅನೇಕ ಬವಣೆಗಳು ನಿರಂತರ,
ಇರಬೇಕು ಇದ್ದು ಜಯಿಸಬೇಕು ,
ಇದುವೇ ಜೀವನ ಇದು ಜೀವನ
ಇದೆ ಜೀವನದ ಅಸಲೀಯತ್ತು
ಕವಿತೆ-ಗುಜ್ಜರ್. ದಾವಣಗೆರೆ
9036389240