ಮೂವರು ಅಂತಾರಾಜ್ಯ ಕಳ್ಳರ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

 ಸೈಯದ್ ರಿಯಾನ್ (19), ಶಿವಕುಮಾರ (25), ಅಪ್ಪು (20) ಬಂಧಿತ ಆರೋಪಿಗಳಾಗಿದ್ದಾರೆ.
ಆಂಧ್ರದಲ್ಲಿ ಕಳ್ಳತನದ ವೇಳೆ ಓರ್ವ ಮಹಿಳೆಯನ್ನು ಆರೋಪಿಗಳು ಕೊಲೆ ಮಾಡಿದ್ದರು. ಗ್ಯಾಂಗ್
33 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿತ್ತು.

ಪೊಲೀಸರ ಕಣ್ತತಪ್ಪಿಸಿ ಆಂಧ್ರಕ್ಕೆ ತೆರಳುವಾಗ ಆರೋಪಿಗಳು ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಗ್ರಾಮದ ಬಳಿ ಮೂರು ಕಡೆ ಸರಗಳ್ಳತನ ಮಾಡಿದ್ದರು. ಅಲ್ಲದೆ ಮೈಸೂರಿನಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ್ದರು.

ಸರಗಳ್ಳತನ ಪ್ರಕರಣ ಬೆನ್ನತ್ತಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪಿಐ ಸಾದಿಕ್ ಪಾಷಾ ಆ್ಯಂಡ್​ ಟೀಮ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಳವು ಮಾಲು ಜಪ್ತಿಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

- Advertisement -  - Advertisement - 
Share This Article
error: Content is protected !!
";