ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ಅವರೇ, “ಮೂರು ಬಿಟ್ಟವರು, ಊರಿಗೆ ದೊಡ್ಡವರು” ಎಂಬಂತೆ ನಡೆಯುತ್ತಿದೆ ನಿಮ್ಮ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ವಸತಿ ಯೋಜನೆಯಲ್ಲಿ ದುಡ್ಡು ಕೊಟ್ಟರಷ್ಟೇ, ಮನೆ ಮಂಜೂರು ಎಂದು ಆಡಳಿತ ಪಕ್ಷದ ಶಾಸಕ ಬಿ.ಆರ್. ಪಾಟೀಲ್ ಅವರೇ ಬಹಿರಂಗ ಪಡಿಸಿದ್ದಾರೆ. ಲಂಚಬಾಕ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಸ್ವತಃ ಕಾಂಗ್ರೆಸ್ ಶಾಸಕರೇ ಆಗ್ರಹಿಸುತ್ತಿದ್ದಾರೆ.
ಆದರೂ, ರಾಜೀನಾಮೆ ಪಡೆಯದೇ ಇರುವುದು ಭ್ರಷ್ಟಾಚಾರಕ್ಕೆ ನಿಮ್ಮ ಮೌನ ಸಮ್ಮತಿ ಇರುವುದನ್ನು ಸೂಚಿಸುತ್ತಿದೆ ಎಂದು ಜೆಡಿಎಸ್ ಹರಿಹಾಯ್ದಿದೆ. ಸಿದ್ದರಾಮಯ್ಯ ಅವರೇ, ಕಿಂಚಿತ್ತಾದರೂ ನೈತಿಕತೆ ಇದ್ದರೆ ಮೊದಲು ಆ ಭ್ರಷ್ಟ ವಸತಿ ಸಚಿವನನ್ನು ನಿಮ್ಮ ಮಂತ್ರಿ ಮಂಡಲದಿಂದ ಕಿತ್ತೊಗೆಯಿರಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

