ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಆ. 26 ರ ಸೋಮವಾರದಂದು ಭದ್ರಾವತಿಯ ನಗರಸಭಾ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಗಹವಹಿಸಿ ಮತ ಚಲಾವಣೆ ಮಾಡಲು ವಿಪ್ ಜಾರಿಗೊಳಿಸಿದ್ದರೂ ಚುನಾವಣೆಗೆ ಹಾಜರಾಗದೆ ವಿಪ್ ವಿಪ್ ಉಲ್ಲಂಘನೆ ಮಾಡಿರುವುದರಿಂದ ಬಿಜೆಪಿಯಿಂದ ಮೂವರು ಸದ್ಸಸ್ಯರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ನಗರಸಭಾ ಸದಸ್ಯರಾದ ವಿ ಕದಿರೇಶ್, ಅನಿತಾ ಮಲ್ಲೇಶ್ ಮತ್ತು ಲಲಿತಾ ನಾರಾಯಣಪ್ಪ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ೬ ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮೇಘರಾಜ್ ತಿಳಿಸಿದ್ದಾರೆ.