ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ಚಿಕ್ಕಚಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ವ್ಯಕ್ತಿಗಳು ಕಾಣೆಯಾದ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ತಾಲ್ಲೂಕಿನ ಕೋಟೆಹಾಳ್ ಗ್ರಾಮದ ಪ್ರಶಾಂತ ತಂದೆ ರಾಜಪ್ಪ(42) ಕಾಣೆಯಾದ ಕುರಿತು ಆಗಸ್ಟ್ 6 ರಂದು ಪ್ರಕರಣ ದಾಖಲಾಗಿದೆ. ಕಾಣೆಯಾದ ಪ್ರಶಾಂತ 5.5 ಅಡಿ ಎತ್ತರವಿದ್ದು, ಧೃಡವಾದ ಮೈಕಟ್ಟು, ಅಗಲವಾದ ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಪ್ರಶಾಂತ ಎಡಗೈ ಮೇಲೆ ಶಶಿ, ರಂಜಿತ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪಿ ಎಸ್ ಎಂಬ ಹಚ್ಚೆ ಗುರುತು ಇದೆ.
ಶೃಂಗೇರಿ ಹನುಮನಹಳ್ಳಿ ಗ್ರಾಮದ ಪೂಜಾ ತಂದೆ ಜಗದೀಶ (27) ಕಾಣೆಯಾದ ಕುರಿತು ಆಗಸ್ಟ್ 8 ರಂದು ಪ್ರಕರಣ ದಾಖಲಾಗಿದೆ. ಕಾಣೆಯಾದ ಪೂಜಾ 5.3 ಅಡಿ ಎತ್ತರವಿದ್ದು, ದೃಢಕಾಯ ದೇಹ, ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಎಡ ಕಣ್ಣಿನ ಹತ್ತಿರ ಹಳೆ ಗಾಯದ ಗುರುತು ಇದೆ. ಕನ್ನಡ ಭಾಷೆ ಮಾತನಾಡುತ್ತಾಳೆ.

ಚಿಕ್ಕಜಾಜೂರು ಗ್ರಾಮದ ಸರಸ್ವತಿ ತಂದೆ ಹನುಮಂತಪ್ಪ (18 ವರ್ಷ 4 ತಿಂಗಳು) ಕಾಣೆಯಾದ ಕುರಿತು ಆಗಸ್ಟ್ 18 ರಂದು ಪ್ರಕರಣ ದಾಖಲಾಗಿದೆ. ಕಾಣೆಯಾದ ಸರಸ್ವತಿ 5.2 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ ಹೊಂದಿದ್ದು, ಎಡ ಕೈಮೇಲೆ ಅಚ್ಚೆ ಇರುತ್ತದೆ. ಮನೆಯಿಂದ ಹೋಗವಾಗ ನೇರಳೆ ಬಣ್ಣದ ಚೂಡಿದಾರ ಧರಿಸಿದ್ದಾಳೆ.
ಕಾಣೆಯಾದವರ ಗುರುತು ಪತ್ತೆಯಾದರೆ ಚಿಕ್ಕಚಾಜೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

