ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರೊಂದು ತೆರದ ಹಾಳು ಬಾವಿಗೆ ಬಿದ್ದರಿಂದಾಗಿ ಕರ್ನಾಟಕದ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ಬಳಿ ಕಾರು ಬಾವಿಗೆ ಉರುಳಿ ಬಿದ್ದು ಕರ್ನಾಟಕದ ಚಿಂತಾಮಣಿ ತಾಲೂಕಿನ ಮುತ್ತಕದಲ್ಲಿ ಗ್ರಾಮದ ನಿವಾಸಿಗಳಾದ ಲೊಕೇಶ(34), ಚಂದನಹಳ್ಳಿ ಗ್ರಾಮದ ಶಿವಾನಂದ, ಕೋಲಾರ ಜಿಲ್ಲೆಯ ಸುಗಟೂರು ಗ್ರಾಮದ ಚಲಪತಿ ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾದಿಂದ ಪಾರಾಗಿದ್ದಾರೆ. ಅಡುಗೆ ಕೆಲಸಕ್ಕೆಂದು ಕಾರಿನಲ್ಲಿ ಹೋಗುತ್ತಿದ್ದರು. ಆ ವೇಳೆ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ಬಳಿಯ ಬಾವಿಗೆ ಕಾರು ಬಿದ್ದಿದೆ. ಪಿಲೇರು ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ಸಂಭವಿಸಿದೆ.
ಅಡುಗೆ ಕೆಲಸಕ್ಕಾಗಿ ಕಾರಿನಲ್ಲಿ ಒಟ್ಟು ಐವರು ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಚಿಂತಾಮಣಿ ಮೂಲದ ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ಬಚಾವ್ ಆಗಿದ್ದಾರೆ. ಬಾವಿ ಆಳವಾಗಿದ್ದರಿಂದ ಕಾರೊನೊಳಗೆ ಮೂವರು ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸ್ಥಳೀಯರು, ಪೊಲೀಸರು ಸೇರಿ ಬಾವಿಯಲ್ಲಿ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಿದರು. ಮೊದಲಿಗೆ ಸ್ಥಳೀಯರು ಅಗ್ಗಗಳನ್ನು ಹಾಕಿ ಕಾರನ್ನು ಮೇಲೆತ್ತಲು ಪ್ರಯತ್ನಿಸಿದರು. ಆದ್ರೆ ಅದು ಸಾಧ್ಯವಾಗಿಲ್ಲ. ಬಳಿಕ ಕ್ರೇನ್ ಮೂಲಕ ಬಾವಿಯೊಳಗಿದ್ದ ಕಾರನ್ನು ಹೊರತೆಗೆಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.